ಭಾರತೀಯರ ದೇಶಭಕ್ತಿಯ ಮಹತ್ವ ತಿಳಿಯಲು ಆರ್‌ಎಸ್‌ಎಸ್ ಸೇರಿಕೊಳ್ಳಿ : ಬಿಜೆಪಿ ಶಾಸಕ ರಾಜಾ ಸಿಂಗ್ -Vishwanews24
ಹೈದರಾಬಾದ್: ಭಾರತೀಯರ ದೇಶಪ್ರೇಮ ನೋಡಲು ಬಯಸಿದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೇರುವಂತೆ ತೆಲಂಗಾಣದ ಗೋಷಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರಸ್ತಾಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ, ‘ಗೋಷಮಹಲ್‌ನಲ್ಲಿ ಸುಮಾರು ಸಾವಿರ ಕಾರ್ಯಕರ್ತರ ಜತೆ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದೇನೆ. ಓವೈಸಿ ಸಹೋದರರು ಭಾರತದ ದೇಶಭಕ್ತಿ ನೋಡಲು ಬಯಸಿದರೆ, ಆರ್‌ಎಸ್‌ಎಸ್ ಸೇರಿಕೊಳ್ಳಿ. ಆಗ ಮಾತ್ರ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಮಹತ್ವ ತಿಳಿಯುತ್ತದೆ ಎಂದಿದ್ದಾರೆ.
ದೇಶದ ವಿರುದ್ಧ ಮಾತನಾಡುವ ಓವೈಸಿ ಸಹೋದರರು, ಭಾರತ್ ಮಾತಾ ಕೀ ಜೈ ಎಂದು ಹೇಳಲು ಹಿಂಜರಿಯುತ್ತಾರೆ. ದೇಶದ್ರೋಹಿಗಳನ್ನು ದೇಶದಿಂದ ಹೊರಗಟ್ಟಲು ಆರ್‌ಎಸ್‌ಎಸ್‌ಗೆ ತಿಳಿದಿದೆ ಎಂದು ಸಿಂಗ್ ಹೇಳಿದರು.
गोशामहाल में #RSS के पतसंचलन कार्यक्रम में हिस्सा लिया लगभग 1000 कार्यकर्ताओ के साथ
मैं असदुद्दीन और अकबरुद्दीन ओवैसी से कहना चाहता हु के अगर आपको भारत के प्रति देश भक्ति देखनी है तो #RSS में जुड़िये आपको पता चल जाएगा कि भारत माता की जय, वन्दे मातरम का महत्व क्या होता है@RSSorg pic.twitter.com/UZslBUxcRq
— Raja Singh (@TigerRajaSingh) October 6, 2019
