ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಬೆಂಬಲ : ಆನ್ ಲೈನ್ ಕ್ಲಾಸ್ ಸ್ಥಗಿತ -Vishwanews24

Featured, ರಾಜ್ಯ ನ್ಯೂಸ್

ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಬೆಂಬಲ : ಆನ್ ಲೈನ್ ಕ್ಲಾಸ್ ಸ್ಥಗಿತ -Vishwanews24

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ರೈತ ಸಂಘಟನೆಗಳು ಡಿಸೆಂಬರ್ 8 ರ ನಾಳೆಯ ಭಾರತ್ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ.

ರಾಜ್ಯದಲ್ಲೂ ಹಸಿರು ಸೇನೆ, ರಾಜ್ಯ ರೈತ ಸಂಘ ಸೇರಿದಂತೆ ಹಲವು ರೈತ ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ. ಈ ನಡುವೆ ನಾಳಿನ ಬಂದ್ ಗೆ ಖಾಸಗಿ ಶಾಲೆಗಳೂ ಬೆಂಬಲ ಸೂಚಿಸಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ. ನಾಳೆ ಆನ್ ಲೈನ್ ಕ್ಲಾಸ್ ಬಂದ್ ಮಾಡಲಾಗುವುದು ಎಂದು ಖಾಸಗಿ ಶಾಲೆ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.

ಭಾರತ್ ಬಂದ್ ಗೆ  ಓಲಾ ಊಬರ್ ಹಾಗೂ ಆಟೋ ಚಾಲಕರ ಸಂಘ ನೈತಿಕ ಬೆಂಬಲ ಸೂಚಿಸಿವೆ. ಅಂಗನವಾಡಿ ಕಾರ್ಯಕರ್ತೆಯರು ಕೂಡ ಬಂದ್ ಗೆ ಬೆಂಬಲಿಸಿ ಸಾಥ್ ನೀಡಿದ್ದಾರೆ. ಈ ಮಧ್ಯೆ ನಾಳೆ ಕರ್ನಾಟಕದಲ್ಲೂ ಬಂದ್ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದೆ.