ಭೀಕರ ಬೈಕ್​ ಅಪಘಾತ: ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರಾದ ಮಗು

Featured, ರಾಜ್ಯ ನ್ಯೂಸ್

ಬೆಂಗಳೂರು: ನೆಲಮಂಗಲದ ಹೆದ್ದಾರಿಯಲ್ಲಿ ಎರಡು ಬೈಕ್​ಗಳ ನಡುವೆ ಭೀಕರ ಅಪಘಾತ ನಡೆದಿದ್ದು ಅದೃಷ್ಟವಶಾತ್​ ಸಿನಿಮೀಯ ರೀತಿಯಲ್ಲಿ ಬೈಕ್​ನಲ್ಲಿದ್ದ ಮಗು ಅಪಾಯದಿಂದ ಪಾರಾಗಿದೆ.

ಪಲ್ಸರ್​ ಬೈಕ್​ವೊಂದು ಮುಂದೆ ಹೋಗುತ್ತಿದ್ದ ಹೋಂಡಾ ಆಕ್ಟೀವಾಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಹೋಂಡಾ ಆಕ್ಟೀವಾ ಮತ್ತು ಬೈಕ್​ನಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ. ಆದರೆ ಮಗುವನ್ನು ಹೊತ್ತ ಬೈಕ್​ ಸುಮಾರು 500 ಮೀಟರ್​ನಷ್ಟು ಚಲಿಸಿ ಡಿವೈಡರ್​ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದೆ.

ಹೆದ್ದಾರಿಯಲ್ಲಿ ಚಾಲಕನಿಲ್ಲದ ಬೈಕ್​ನಲ್ಲಿ 500 ಮೀಟರ್​ ಚಲಿಸಿದರೂ ಸಹ ಮಗು ಅಪಾಯದಿಂದ ಪಾರಾಗಿದೆ. ಆದರೆ ಅಪಘಾತ ಸ್ಥಳದಲ್ಲೇ ಬೈಕ್​ನಿಂದ ಬಿದ್ದ ಮಗುವಿನ ತಂದೆ ತಾಯಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ಅಪಘಾತದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.