ಭೂಕುಸಿತದಿಂದ ಮುಚ್ಚಿರುವ ರಸ್ತೆ : ಕುಂದಾಪುರ – ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆಗೆ ಕೋಟ ಆಗ್ರಹ – vishwanews24

Featured, ಉಡುಪಿ

ಭೂಕುಸಿತದಿಂದ ಮುಚ್ಚಿರುವ ರಸ್ತೆ : ಕುಂದಾಪುರ – ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆಗೆ ಕೋಟ ಆಗ್ರಹ

ಕುಂದಾಪುರ :ಭೂಕುಸಿತದಿಂದ ರಸ್ತೆ ಮುಚ್ಚಿರುವ ಕಾರಣ ಬೆಂಗಳೂರು ಮತ್ತು ಉಡುಪಿ ಜಿಲ್ಲೆಯನ್ನು ಮರು-ಸಂಪರ್ಕಿಸಲು ಪಡೀಲ್ ಬೈಪಾಸ್ ಮೂಲಕ ಕುಂದಾಪುರ ಮತ್ತು ಬೆಂಗಳೂರು ನಡುವೆ ವಿಶೇಷ ರಾತ್ರಿ ರೈಲು ಪ್ರಯಾಣ ಆರಂಭಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೌತ್ ವೆಸ್ಟರ್ನ್ ರೈಲ್ವೇಸ್ ನ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ.

ರಾಜ್ಯಾದ್ಯಂತ ಡೆಂಗ್ಯೂ ಹಾವಳಿ : ಮತ್ತೋರ್ವ ಯುವತಿ ಬಲಿ – vishwanews24

ಕುಂದಾಪುರ-ಬೆಂಗಳೂರು ನಡುವೆ ಭೂಕುಸಿತ ಹಾಗೂ ಹಲವು ರಸ್ತೆಗಳು ಬಂದ್‌ ಆಗಿರುವುದರಿಂದ ರಸ್ತೆ ಸಾರಿಗೆಯನ್ನೇ ನಂಬಿಕೊಂಡಿರುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡು ಪ್ರಮುಖ ಸ್ಥಳಗಳ ನಡುವೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಉಡುಪಿ ಮತ್ತು ಕುಂದಾಪುರವನ್ನು ಬೆಂಗಳೂರಿಗೆ ಪಡೀಲ್ ಬೈಪಾಸ್ ಮೂಲಕ ಸಂಪರ್ಕಿಸಲು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ ವಿಶೇಷ ರೈಲು ಆರಂಭಿಸಬೇಕು ಎಂಬುದಾಗಿ ಈ ಹಿಂದೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಮನವಿ ಮಾಡಿತ್ತು.

ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜು. 23 ಮತ್ತು 24ರಂದು ವೈಭವದ ಆಟಿ ಮಾರಿಪೂಜೆ ಸಂಭ್ರಮ – vishwanews24 https://wp.me/p9KQap-oSr

Leave a Reply