ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಸೆ.17ರಿಂದ ವಾಹನ ಸಂಚಾರದಲ್ಲಿ ಬದಲಾವಣೆ – vishwanews24
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಸೆ.17ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
ಸಾರ್ವಜನಿಕರು ಬದಲಿ ಮಾರ್ಗ ಬಳಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಸೂಚನೆ
ಮಂಗಳೂರು: ಸೆ.18ರಂದು ಪಡೀಲ್ನ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ)ಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಸೆ.17ರಿಂದ ಸೆ.19ರವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಸಂಚಾರದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ – vishwanews24
ಗಣ್ಯರ ಸಂಚಾರವಿರುವ ಪ್ರಮುಖ ರಸ್ತೆಗಳು:
ಸೆ. 17ರ ಸಂಜೆ ಮತ್ತು ಸೆ. 19ರ ಬೆಳಿಗ್ಗೆ:
ಬಜಪೆ ವಿಮಾನ ನಿಲ್ದಾಣ – ಕಾವೂರು – ಬೋಂದೆಲ್ – ಮೇರಿಹಿಲ್ – ಕೆ.ಪಿ.ಟಿ. – ಕದ್ರಿ ಕಂಬಳ – ಬಂಟಾಸ್ಟೆಲ್ – ಡಾ| ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಹಂಪನಕಟ್ಟೆ – ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್.
ಸೆ. 18ರ ಬೆಳಿಗ್ಗೆ:
ಹ್ಯಾಮಿಲ್ಟನ್ ಜಂಕ್ಷನ್ – ಕ್ಲಾಕ್ ಟವರ್ – ಹಂಪನಕಟ್ಟೆ – ಡಾ| ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಕೆ.ಪಿ.ಟಿ. ಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ನಾಗುರಿ – ಬಜಾಲ್ ಕ್ರಾಸ್ (ಪ್ರಜಾಸೌಧ) – ಪಡೀಲ್ ಜಂಕ್ಷನ್.
ಉಡುಪಿ: 10 ತಿಂಗಳ ಹಿಂದೆ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ; ಆರೋಪಿ ಬಂಧನ – vishwanews24
ವಿಶೇಷ ಸೂಚನೆ: ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಆಂಬ್ಯುಲೆನ್ಸ್ ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
ಸಾರ್ವಜನಿಕರಿಗೆ ಬದಲಿ ಮಾರ್ಗಗಳು:
►►ಬದ್ರಿಯಾ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್ – ನಿಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಮುಖೇನಾ ಸಂಚರಿಸುವುದು.
►► ಅದೇ ರೀತಿ ಹ್ಯಾಮಿಲ್ಟನ್ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮುಖೇನಾ ಸಂಚರಿಸುವುದು.
►► ಪಂಪುವೆಲ್ ಜಂಕ್ಷನ್ನಿಂದ ನಾಗುರಿ ಮೂಲಕ ಪಡಿಲ್ ಜಂಕ್ಷನ್ ಕಡೆಗೆ ಅಥವಾ ಪಡಿಲ್ ಜಂಕ್ಷನ್ ಕಡೆಯಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ – ಕೈಕಂಬ – ಮರೋಳಿ ಮೂಲಕ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮೂಲಕ ಸಂಚರಿಸುವುದು.
►►ಬಜಾಲ್ ಕ್ರಾಸ್(ಪ್ರಜಾಸೌಧ) ನಿಂದ ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ಕಡೆಗೆ ಬರುವ ಮತ್ತು ಹೋಗುವ ಎಲ್ಲಾ ತರಹದ ವಾಹನಗಳು ಪಡಿಲ್ ಬಜಾಲ್ ಕ್ರಾಸ್ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ – ಬಜಾಲ್ ಮೂಲಕ ಸಂಚರಿಸುವುದು.
►►ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಡು – ಮಂಗಳಾದೇವಿ ಮೂಲಕ ನಗರಕ್ಕೆ ಸಂಚರಿಸುವ ಮಾರ್ಗ ಬಳಸಲು ಪೊಲೀಸರು ತಿಳಿಸಿದ್ದಾರೆ.
