ಮಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ಎನ್‌. ಶಶಿಕುಮಾರ್‌ ನೇಮಕ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ಎನ್‌. ಶಶಿಕುಮಾರ್‌ ನೇಮಕ -Vishwanews24

ಮಂಗಳೂರು,:ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ವಿಕಾಸ್ ಕುಮಾರ್ ಅವರನ್ನು ವರ್ಗಾಯಿಸಲಾಗಿದ್ದು, ವಿಕಾಸ್ ಕುಮಾರ್ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಒಂದು ವರ್ಷ ಪೂರೈಸುವ ಮೊದಲೇ ಅವರ ವರ್ಗಾವಣೆಯಾಗಿದೆ.

ಮಂಗಳೂರಿನ ನೂತನ ಕಮಿಷನರ್ ಆಗಿ ಬೆಂಗಳೂರಿನ ಶಶಿಕುಮಾರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಮಾಡಿದೆ. ಎನ್.ಶಶಿಕುಮಾರ್ ಅವರು ಚಿತ್ರದುರ್ಗ ಮೂಲದವರಾಗಿದ್ದು, 2007ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬಿಎಸ್ಸಿ ಕೃಷಿ ಪದವೀಧರರಾದ ಇವರು ಈ ಹಿಂದೆ ಬೆಂಗಳೂರು ಉತ್ತರ ಡಿಸಿಪಿ ಆಗಿ, ವೈರ್‌ಲೆಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ..

ಕಾಪು ಕರಂದಾಡಿ ವಾದ್ಯ ಬ್ಯಾಂಡು ನಾಗಸ್ವರದೊಂದಿಗೆ ವಿದ್ಯಾರ್ಥಿಗಳಿಗೆ ಶಾಲೆಗೆ ಸ್ವಾಗತ.

https://bit.ly/2WXhnp4

ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ, ಹೇಮಂತ್ ನಿಂಬಾಳ್ಕರ್ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸೇರಿದಂತೆ ಹಲವು ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ.