ಮಂಗಳೂರಿನ 26 ವರ್ಷದ ಯುವಕನನ್ನು ಬಲಿ ಪಡೆದುಕೊಂಡ ಕೊರೋನಾ:vishwanews24

Featured, ಕ್ರೀಡೆ

ಮಂಗಳೂರಿನ 26 ವರ್ಷದ ಯುವಕನನ್ನು ಬಲಿ ಪಡೆದುಕೊಂಡ ಕೊರೋನಾ:vishwanews24

ದಕ್ಷಿಣ ಕನ್ನಡ: ‌ಜಿಲ್ಲೆಯಲ್ಲಿ ಕೊರೊನಾಗೆ ಮಹಾರಾಷ್ಟ್ರದಿಂದ ಬಂದಿದ್ದ 26 ವರ್ಷದ ಯುವಕ ಬಲಿಯಾಗಿದ್ದು, ಇದರಿಂದ ಮಂಗಳೂರಿನಲ್ಲಿ ಕೊರೊನಾಗೆ ಎಂಟನೇ ಬಲಿಯಾದಂತಾಗಿದೆ.

ಯುವಕ ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ‌ಮುಗಿಸಿ ಮನೆಗೆ ಹೋಗಿದ್ದು, ಕಿಡ್ನಿ ಸಮಸ್ಯೆ ಹಿನ್ನೆಲೆ ‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಯುವಕ ಭಾನುವಾರ ಸಾವನ್ನಪ್ಪಿದ್ದಾನೆ. ಈತನ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಪರೀಕ್ಷೆ ವೇಳೆ ಕೊರೊನಾ ಇರುವುದು ದೃಢಪಟ್ಟಿದೆ.