ಮಂಗಳೂರು : ಅನಾರೋಗ್ಯದಿಂದ ಯುವ ವಕೀಲೆ ವಿಧಿವಶ – vishwanews24
ಮಂಗಳೂರು : ಅನಾರೋಗ್ಯದಿಂದ ಯುವ ವಕೀಲೆ ವಿಧಿವಶ
ಮಂಗಳೂರು : ಬಹುಮುಖ ಪ್ರತಿಭೆ, ವಕೀಲೆ ರಾಜಶ್ರೀ ಜೆ. ಪೂಜಾರಿ ವಿಧಿವಶರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಗುಣಮುಖರಾಗಲಿ ಎಂದು ಅವರ ಹಿತೈಷಿಗಳು ಪ್ರಾರ್ಥಿಸುತ್ತಿದ್ದರು. ಆದರೆ, ಪ್ರಾರ್ಥನೆ ಫಲಿಸಲಿಲ್ಲ.
ಬರಹಗಾರ್ತಿ, ಸಾಹಿತಿ, ನಿರೂಪಕಿ, ವಕೀಲೆ ಹೀಗೆ ನಾನಾ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ರಾಜಶ್ರೀ ಸಕ್ರಿಯವಾಗಿದ್ದರು. ತನ್ನ ಸೌಮ್ಯ ಸ್ವಭಾವದಿಂದ ಬಹಳಷ್ಟು ಮಂದಿಗೆ ಆಪ್ತರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಮಡಿಕೇರಿ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ : ಕಾರಿನಲ್ಲಿದ್ದ ನಾಲ್ವರು ಮೃತ್ಯು – vishwanews24
ಅಂದ್ಹಾಗೆ, ರಾಜಶ್ರೀಗೆ ಜೀವನದಲ್ಲಿ ಬಹಳಷ್ಟು ಕನಸಿತ್ತು. ಐಎಎಸ್ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ, ಬಾಳಿ ಬದುಕಬೇಕಾಗಿದ್ದ ಜೀವ ವಿಧಿಯಾಟಕ್ಕೆ ಬಲಿಯಾಗಿದೆ. ಅರಳಿ ನಲಿಯಬೇಕಾಗಿದ್ದ ಬಹುಮುಖ ಪ್ರತಿಭೆ ಮರೆಯಾಗಿದೆ
