ಮಂಗಳೂರು : ಇಬ್ಬರು ಮಹಿಳಾ ಅಧಿಕಾರಿ ಸೇರಿ 6 ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ – Vishwanews24
ಮಂಗಳೂರು : ಇಬ್ಬರು ಮಹಿಳಾ ಅಧಿಕಾರಿ ಸೇರಿ 6 ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ – Vishwanews24
ಮಂಗಳೂರು: ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಎಂಟು ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ವನಜಾಕ್ಷಿ (ಸಿಸಿಆರ್‌ಬಿ, ಪಿಎಸ್‌ಐ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಎಸಿಬಿ ಹೆಡ್ ಕಾನ್ ಸ್ಟೆಬಲ್ ಹರಿಪ್ರಸಾದ್, ಗೃಹ ರಕ್ಷಕ ದಳದ ದ.ಕ ಜಿಲ್ಲಾ ಪ್ಲಟೂನ್ ಕಮಾಂಡರ್ ಆರ್ಕ್ ಸೆರಾ ಆಯ್ಕೆಯಾಗಿದ್ದಾರೆ.
ಇನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಪೊಲೀಸರಿಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರ “ಪರೀಕ್ಷಾ ಪೇ ಚರ್ಚಾ” ಕಾರ್ಯಕ್ರಮಕ್ಕೆ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ – Vishwanews24
