ಮಂಗಳೂರು – ಉಡುಪಿ : ಗ್ರಾ ಪಂ ಚುನಾವಣಾ ಫಲಿತಾಂಶ : ಹಲವು ಪ್ರದೇಶದಲ್ಲಿ ಬಿಜೆಪಿಯೇ ಮೇಲುಗೈ -Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು / ಉಡುಪಿ : ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ – ಹೆಚ್ಚಿನ ಪ್ರದೇಶದಲ್ಲಿ ಬಿಜೆಪಿಯೇ ಮೇಲುಗೈ -Vishwanews24

ಮಂಗಳೂರು / ಉಡುಪಿ,: ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಹಲವು ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ಬೆಂಗ್ರೆ ವಾರ್ಡ್ ಪಡುತೋನ್ಸ್ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ದೀರೇಂದ್ರ ಅವರು 337 ಮತಗಳಲ್ಲಿ ಹಾಗೂ ಲೋಕೇಶ್ 367 ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿತ ಪ್ರತಿಭಾ ಬಾಸ್ಕರ್ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ. ಬಿಜೆಪಿ 3 ಸ್ಥಾನಗಳನ್ನು, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದುಕೊಂಡು ಜಯ ಗಳಿಸಿದ್ದಾರೆ.

ಉಡುಪಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಭಾತ್ ಕುಮಾರ್ ಅವರು ಚುನಾವಣೆಯಲ್ಲಿ 290 ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ. ಬ್ರಹ್ಮಾವರ ಯಡ್ತಡಿ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಲೋಕೇಶ್ 80 ಮತಗಳಿಂದ ಜಯಗಳಿಸಿದರು.