ಮಂಗಳೂರು: ಐವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದ ನಗರ ಪೊಲೀಸ್ ಇಲಾಖೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಐವರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದ ನಗರ ಪೊಲೀಸ್ ಇಲಾಖೆ

ಮಂಗಳೂರು : ನಾಲ್ವರು ವ್ಯಕ್ತಿಗಳಿಗೆ ನೀಡಲಾಗಿದ್ದ ಗನ್‌ಮ್ಯಾನ್ ಭದ್ರತೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಒಟ್ಟು 5 ಮಂದಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿತ್ತು. ಆ ಪೈಕಿ ಓರ್ವರು ಈ ಹಿಂದೆ ಅವರಾಗಿಯೇ ವಾಪಸ್ ನೀಡಿದ್ದರು. ಇನ್ನುಳಿದ ನಾಲ್ವರಿಗೆ ಇರಬಹುದಾದ ಬೆದರಿಕೆ, ಭದ್ರತೆಯ ಆತಂಕದ ಕುರಿತು ಪರಿಶೀಲನೆ ನಡೆಸಿ ಅನಂತರ ಗನ್‌ಮ್ಯಾನ್‌ನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಯಾವುದೇ ವ್ಯಕ್ತಿಗೆ ಇರುವ ಭದ್ರತಾ ಆತಂಕವನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಗನ್‌ಮ್ಯಾನ್ ಭದ್ರತೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಇತ್ತೀಚಿನ ಪರಿಶೀಲನೆ ಯನ್ನು ಮಾರ್ಚ್‌ಗೆ ನಡೆಸಲಾಗಿತ್ತು. ಆದಾಗ್ಯೂ ಗನ್‌ಮ್ಯಾನ್ ಭದ್ರತೆ ಅಗತ್ಯವಿದ್ದರೆ ಇಲಾಖೆಗೆ ಹಣ ಪಾವತಿಸಿ ಪಡೆದುಕೊಳ್ಳಲು ಅವಕಾಶವಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply