ಮಂಗಳೂರು: ಕಂಕನಾಡಿಯ ನಾಗುರಿ ಒಕಿನವ ಸ್ಕೂಟರ್‌ ಶೋ ರೂಮ್‌ ಬೆಂಕಿಗಾಹುತಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕಂಕನಾಡಿಯ ನಾಗುರಿ ಒಕಿನವ ಸ್ಕೂಟರ್‌ ಶೋ ರೂಮ್‌ ಬೆಂಕಿಗಾಹುತಿ

ಮಂಗಳೂರು: ಇಲ್ಲಿನ ಕಂಕನಾಡಿಯ ನಾಗುರಿ ಸ್ಕೂಟರ್ ಶೋ ರೂಮ್‌ವೊಂದು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ (ಜೂ24) ನಡೆದಿದೆ.

ಒಕಿನವ ಬ್ಯಾಟರಿ ಸ್ಕೂಟರ್‌ ಶೋ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಸ್ಕೂಟರ್ ಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸ್ಕೂಟರ್‌ ಶೋ ರೂಮ್‌ ಮೇಲ್ಗಡೆ ಮನೆ ಇದ್ದು, ಹಮೀದ್ ಎಂಬವರಿಗೆ ಸೇರಿದೆ ಎಂದು ತಿಳಿದು ಬಂದಿದೆ.

ಘಟನೆ ಕಂಕನಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ‌ ನಂದಿಸುವ ಕಾರ್ಯ ನಡೆಯುತ್ತಿದೆ.

ಉಡುಪಿ : ಜುಲೈ 1 ರಿಂದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ – Vishwanews24

Leave a Reply