ಮಂಗಳೂರು: ಕದ್ರಿ ಪಾರ್ಕ್‌ನಿಂದ ಲಾಲ್‌ ಭಾಗ್‌ ಸಂಪರ್ಕಿಸುವ ಮುಖ್ಯ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡಬೇಕು : ಕೊಂಕಣಿ ಲೇಖಕರ ಸಂಘ ಒತ್ತಾಯ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕದ್ರಿ ಪಾರ್ಕ್‌ನಿಂದ ಲಾಲ್‌ ಭಾಗ್‌ ಸಂಪರ್ಕಿಸುವ ಮುಖ್ಯ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡಬೇಕು : ಕೊಂಕಣಿ ಲೇಖಕರ ಸಂಘ ಒತ್ತಾಯ

ಮಂಗಳೂರು: ಕೇಂದ್ರದ ಮಾಜಿ ಸಚಿವ, ಕರಾವಳಿ ಕುವರ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಕದ್ರಿ ಪಾರ್ಕ್‌ನಿಂದ ಲಾಲ್‌ ಭಾಗ್‌ ಸಂಪರ್ಕಿಸುವ ಮುಖ್ಯ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡಬೇಕು ಎಂದು ಕೊಂಕಣಿ ಲೇಖಕರ ಸಂಘ ಒತ್ತಾಯಿಸಿದೆ.

ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ಮಾತನಾಡಿ,

ಮಂಗಳೂರು ಕದ್ರಿ ಪಾರ್ಕ್ ನಿಂದ ಲಾಲ್ ಭಾಗ್‌ ಸಂಪರ್ಕಿಸುವ ಮುಖ್ಯ ರಸ್ತೆಗೆ ನಾಮಕರಣ ಮಾಡಬೇಕೆಂದು ಜಾಜ್ ಅವರ ಅಭಿಮಾನಿ ಬಳಗದ ಒತ್ತಾಸೆಯಾಗಿದೆ.

ಬಡ ಜನಸಾಮಾನ್ಯರ ಪಾಲಿನ ಹೀರೋ ಆಗಿದ್ದ ಜಾರ್ಜ್ ಫೆನಾಂಡಿಸ್ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು.1967ರಿಂದ 2004ರವರೆಗೆ 9 ಬಾರಿ ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿ, ರಾಷ್ಟ್ರೀಯ ನಾಯಕರಾಗಿ ಜನಸೇವೆಗೈದಿದ್ದಾರೆ. ಜಾರ್ಜ್ ಫೆರ್ನಾಂಡಿಸ್‌ರವರು ಕೇಂದ್ರ ಸಂಪುಟದಲ್ಲಿ ಸಂವಹನ, ಕೈಗಾರಿಕೆ, ರೈಲ್ವೇ ಮತ್ತು ರಕ್ಷಣಾ ಸಚಿವರಾಗಿ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ್ದಾರೆ.

ಉಡುಪಿ : ಕಳಪೆ ರಸ್ತೆ ಕಾಮಗಾರಿ : ಕಾಂಕ್ರಿಟ್ ಕುಸಿದು ಹೊಳೆಗೆ ಬಿದ್ದ ಟಿಪ್ಪರ್ ಲಾರಿ – Vishwanews24

ಮುಂಬೈ ಮತ್ತು ಕರಾವಳಿಯ ಕೊಂಡಿಯಾಗಿರುವ ಕೊಂಕಣ ರೈಲ್ವೆಯ ವಾಸ್ತುಶಿಲ್ಪಿಯಾಗಿರುವ ಅವರು, ಏಷ್ಯಾದ 2ನೆ ಅತೀ ದೊಡ್ಡ ರೈಲ್ವೇ ಜಾಲವನ್ನು ಯೋಜಿಸಿ, ಕಾರ್ಯಗತಗೊಳಿಸುವಲ್ಲಿ ಶ್ರಮಿಸಿದ್ದಾರೆ.

ರಕ್ಷಣಾ ಮಂತ್ರಿಯಾಗಿ ಕಾರ್ಗಿಲ್ ಯುದ್ಧ, ಪೋಖ್ರಾನ್ 2 ಪರಮಾಣ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಅವರು ಉತ್ತಮ ಆಡಳಿತಗಾರ, ಪ್ರಬಲ ವಾಗ್ಮಿಯೂ ಆಗಿದ್ದಾರೆ. ಅವರ ಹೆಸರನ್ನು ಅವರ ಹುಟ್ಟೂರಿನ ರಸ್ತೆಗೆ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಒತ್ತಾಯಿಸಿದರು.

ಕೊಂಕಣಿ ಕವಿ ಟೈಟಸ್ ನೊರೊನ್ನಾ, ಮಾಜಿ ಮೇಯರ್ ದಿವಾಕರ್, ಲಯನ್ಸ್ ಕ್ಲಬ್ ಇಂಟರ್‌ ನ್ಯಾಷನಲ್‌ನ ಜಿಲ್ಲಾ ಮಾಜಿ ಗವರ್ನರ್ ರೊನಾಲ್ಡ್ ಗೋಮ್ಸ್, ಲೇಖಕ ಮತ್ತು ಅಂಕಣಕಾರ ವಿಲಿಯಂ ಪಾಯ್ಸ್ ಉಪಸ್ಥಿತರಿದ್ದರು.

ಉಡುಪಿ : ಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ , ಗೊತ್ತಾದರೆ ನಿಮಗೆ ತಿಳಿಸುತ್ತೇನೆ : ಪ್ರಮೋದ್ ಮಧ್ವರಾಜ್ – Vishwanews24

Leave a Reply