ಮಂಗಳೂರು: ಕಳ್ಳತನ ಮಾಡಿದ್ದ ಬೈಕ್‌ ನಲ್ಲಿ ತಿರುಗಾಟ – ಇಬ್ಬರು ಆರೋಪಿಗಳ ಬಂಧನ  – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕಳ್ಳತನ ಮಾಡಿದ್ದ ಬೈಕ್‌ ನಲ್ಲಿ ತಿರುಗಾಟ – ಇಬ್ಬರು ಆರೋಪಿಗಳ ಬಂಧನ 

ಮಂಗಳೂರು: ಕಳ್ಳತನ ಮಾಡಿದ ಬೈಕ್‌ ನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಫಾರಿಶ್‌ ಶರ್ಮಾ(19), ಧನುಷ್‌ (20) ಬಂಧಿತ ಆರೋಪಿಗಳು. ಯಮಹಾ ಅರ್ ಎಕ್ಸ್ ,ಬಜಾಜ್ ಪಲ್ಸರ್ ಬೈಕ್ ಗಳನ್ನು ಆರೋಪಿತಗಳಿಂದ ಸ್ವಾಧೀನಪಡಿಸಕೊಳ್ಳಲಾಗಿದೆ.

ಮಂಗಳವಾರ ( 28-03-2023 ರಂದು) ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್‌ ಸವಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಶಯಸ್ಪದವಾಗಿ ಕಂಡು ಬಂದ ಬಗ್ಗೆ ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಈ ಎರಡು ಬೈಕ್‌ ಗಳು ಈ ಹಿಂದೆ ಮಂಗಳೂರು ನಗರದ ಪಂಪವಲ್ ನ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಅರ್ ಎಕ್ಸ್ ಬೈಕ್ ನ್ನು ಹಾಗೂ ವಲೇನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ ಗಳೆಂದು ತಿಳಿದು ಬಂದಿದೆ.

ಇವತ್ತಿನಿಂದ ಬಿಜೆಪಿ ಸರ್ಕಾರದ ಕೊನೆಯ ಕ್ಷಣ ಆರಂಭ : ಡಿ.ಕೆ. ಶಿ – VIshwanews24

ಬಂಧಿತ ಆರೋಪಿಗಳಲ್ಲಿ ಫಾರಿಶ್‌ ಶರ್ಮಾ ವಿರುದ್ದ 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಠಾಣೇಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ.

Leave a Reply