ಮಂಗಳೂರು: ಕಾಂಗ್ರೆಸ್ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ : ರಮಾನಾಥ ರೈ
ಮಂಗಳೂರು: ಜಾತಿ ಆಧಾರಿತ ಮರಾಠ, ವೀರಶೈವ ಅಭಿವೃದ್ಧಿ ನಿಗಮ ಕುರಿತಾದ ಬಿಜೆಪಿ ಸರಕಾರದ ಘೋಷಣೆಯನ್ನ ‘ಚುನಾವಣಾ ರಾಜಕೀಯ’ ಎಂದು ಟೀಕಿಸಿರುವ ಮಾಜಿ ಸಚಿವ ರಮಾನಾಥ ರೈ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಸಮಾಜದ ದುರ್ಬಲ, ಅವಕಾಶ ವಂಚಿತ ಜನರಿಗೆ ಸಾಮಾಜಿಕ ನ್ಯಾಯ ಕೊಟ್ಟಿರುವ ಪಕ್ಷವಾಗಿದೆ.
ಕಾಂಗ್ರೆಸ್ ನನ್ನು ಎರಡೂ ಕಡೆಯಿಂದಲೂ ದೂಷಿಸುವವರು ಇದ್ದಾರೆ, ಆದರೆ ಕಾಂಗ್ರೆಸ್ ಯಾವತ್ತೂ ದೇಶದ ದೊಡ್ಡ ಜಾತ್ಯತೀತ ಪಕ್ಷವಾಗಿಯೇ ಉಳಿಯಲಿದೆ ಎಂದರು. ಅಲ್ಲದೇ, ನಿಗಮ ಮಂಡಳಿಗಳನ್ನ ಮಾಡೋದಾದರೆ ಪ್ರತಿಯೊಂದು ಜಾತಿಗೂ ಮಾಡಲಿ, ಅದು ಬಿಟ್ಟು ಈ ರೀತಿಯ ರಾಜಕಾರಣ ಸರಿಯಲ್ಲ. ಬಿಜೆಪಿ ಪ್ರತಿಯೊಂದನ್ನೂ ಚುನಾವಣಾ ರಾಜಕೀಯ ದೃಷ್ಟಿಯಿಂದಲೇ ಮಾಡುತ್ತದೆ ಎಂದರು
