ಮಂಗಳೂರು : ಕಾಂತಾರ ಸಿನಿಮಾದಲ್ಲಿ ದಲಿತರ ಮತ್ತು ಮಹಿಳೆಯರ ಅವಹೇಳನ : ಸಿನಿಮಾ ಸ್ಥಗಿತಕ್ಕೆ ಸಮತಾ ಸೈನಿಕ ದಳ ಆಗ್ರಹ – Vishwanews24

Featured, ದಕ್ಷಿಣ ಕನ್ನಡ

ಕಾಂತಾರ’ ಸಿನಿಮಾದಲ್ಲಿ ದಲಿತರ ಮತ್ತು ಮಹಿಳೆಯರ ಅವಹೇಳನ : ಸಿನಿಮಾ ಸ್ಥಗಿತಕ್ಕೆ ಸಮತಾ ಸೈನಿಕ ದಳ ಆಗ್ರಹ

ಮಂಗಳೂರು : ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದ್ದು, ಕಾಂತಾರ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಸಮತಾ ಸೈನಿಕ ದಳ ಆಗ್ರಹಿಸಿದೆ.

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾದಲ್ಲಿ ದಲಿತರು ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕುವಲ್ಲಿ ಸೆನ್ಸಾರ್ ಮಂಡಳಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಕೂಡಲೇ ಕಾಂತಾರ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲು ಕ್ರಮ ಕೈಗೊಳಳಬೇಕು ಎಂದು ಸಮತಾ ಸೈನಕ ದಳ ಒತ್ತಾಯಿಸಿದೆ.

ಕಾಂತಾರ ಸಿನಿಮಾದ ಪೋಸ್ಟರ್ ಮೇಲೆ ಅಶ್ಲೀಲ ಬರಹ ಬರೆದ ಕಿಡಿಗೇಡಿಗಳು...!! -  themangaloremirror.in

ಈ ಬಗ್ಗೆ ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಮಾತನಾಡಿ, ಕಾಂತಾರ ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದ್ದು, ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿದ್ದಾರೆ.

ಕಾಂತಾರ ಸಿನಿಮಾದಲ್ಲಿ ದಲಿತರು ಹಣ, ಹೆಂಡ ಕೊಟ್ಟರೆ ಏನು ಬೇಕಾದ್ರೂ ಮಾಡುತ್ತಾರೆ ಎಂಬಂತೆ ಚಿತ್ರಿಸಲಾಗಿದೆ. ದೈವ ನರ್ತಕರೂ ಕೂಡ ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದಾರೆ. ದಲಿತರಷ್ಟೇ ಅಲ್ಲದೇ ದೈವ ನರ್ತಕರ ಕುಟುಂಬಗಳಿಗೂ ಅವಮಾನ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಮತ್ತೆ ಕಾಂತಾರ ಸಿನಿಮಾ ಪರಿಶೀಲನೆ ಮಾಡಬೇಕು ಎಂದು ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು ಮನವಿ ಮಾಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ತಮಿಳು ನಟ ವಿಶಾಲ್ – Vishwanews24

ಎಲ್ಲಾ ಸಮುದಾಯದ ಜನರು ಅನೋನ್ಯರಾಗಿದ್ದಾರೆ. ಆದರೆ ಚಿತ್ರದಲ್ಲಿ ಸಮಾಜದಲ್ಲಿ ಒಡಕನ್ನು ಮಾಡಲಾಗಿದೆ. ನಲಿಕೆ,ಪಂಬಂಧ,ಪರವ ಸಮುದಾಯವನ್ನು ಅವಮಾನ ಮಾಡಲಾಗಿದೆ‌. ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಬಳಸಲಾಗಿದೆ. ಚಿತ್ರದಲ್ಲಿ ಹುಡುಗರು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನರ್ತಕ ಕುಟುಂಬದಲ್ಲಿ ಆ ರೀತಿಯ ಕೆಟ್ಟ ಶಬ್ಧ ಬಳಕೆ ಮಾಡುವುದಿಲ್ಲ. ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳೋದು ದುಃಖ ತಂದಿದೆ. ಎಲ್ಲಾ ನರ್ತಕ ಸಮುದಾಯ ಭಲಾಡ್ಯ ಸಮುದಾಯವನ್ನು ನಂಬಿ ಕೊಂಡಿದೆ. ಸೆನ್ಸಾರ್ ಮಂಡಳಿ ಕಾನೂನು ಚೌಕಟ್ಟಿನಲ್ಲಿ ಆ ಚಿತ್ರವನ್ನು ನೋಡಬೇಕಿತ್ತು. ಆ ಚಿತ್ರಕ್ಕೆ ಸೆನ್ಸರ್ ಒಂದು ಕಟ್ ಕೂಡಾ ಮಾಡಿಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಹೇಳಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ಮಾಡಬೇಕಾದ ಸೆನ್ಸಾರ್ ಮಂಡಳಿ ಪರಿಶೀಲನೆ ಮಾಡಬೇಕು ಅಂತಾ ಜಿಲ್ಲಾಡಳಿತಕ್ಕೆ ದಲಿತ ಸಂಘಟನೆಗಳು ಒತ್ತಾಯ ಮಾಡಿದೆ.

ದೈವಗಳು ಅಭಯ ನೀಡುತ್ತವೆ, ಕೊಲ್ಲುವುದಿಲ್ಲ: ಕಾಂತಾರ ಸ್ಥಗಿತಕ್ಕೆ ದಲಿತ ಸಮುದಾಯ ಆಗ್ರಹ |  Dalit Organizations Demand To Stopping Kantara Film Screening - Kannada  Oneindia

ಚಿತ್ರದಲ್ಲಿ ದಲಿತ ಹುಡುಗರನ್ನು ಕೀಳಾಗಿ ಕಾಣಲಾಗಿದೆ. ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುತ್ತೇನೆ. ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ. ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಎಂದು ಹೇಳೋದು ದುರಂತವಾಗಿದೆ. ವ್ಯಕ್ತಿಗತವಾಗಿ ರಿಷಬ್ ಶೆಟ್ಟಿ ಒಳ್ಳೆಯವರು, ಆದರೆ ಚಿತ್ರವನ್ನು ಕಾನೂನು ಚೌಕಟ್ಟಿನಲ್ಲಿ ‌ನೋಡಬೇಕಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡುತ್ತೇವೆ. ಇದು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಆಕ್ಷೇಪಾರ್ಹ ಸೀನ್‌ಗೆ ಕತ್ತರಿ ಹಾಕಬೇಕು. ಗುಳಿಗ ಕೋಲ ಕಾಂತಾರ ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ ಎಂದು ದಕ್ಷಿಣ ಕ‌ನ್ನಡ ಜಿಲ್ಲಾ ನಲಿಕೆ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೈಂದೂರು: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಕೆ ಗೋಪಾಲ ಪೂಜಾರಿ ಅರ್ಜಿ‌ ಸಲ್ಲಿಕೆ – Vishwanews24

Leave a Reply