ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ – ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ  ಸಂತ್ರಸ್ತನಿಗೆ ಸುಸಜ್ಜಿತ ಮನೆ ಹಸ್ತಾಂತರಿಸಿದ ಗುರುಬೆಳದಿಂಗಳು ಟ್ರಸ್ಟ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ – ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ  ಸಂತ್ರಸ್ತನಿಗೆ ಸುಸಜ್ಜಿತ ಮನೆ ಹಸ್ತಾಂತರಿಸಿದ ಗುರುಬೆಳದಿಂಗಳು ಟ್ರಸ್ಟ್

ಮಂಗಳೂರು : ನಗರದ ಕಂಕನಾಡಿ ಗರೋಡಿಯ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು, ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಕೊಟ್ಟ ಮಾತಿನಂತೆ ಇಂದು(ಮಾ.22) ಗುರುಬೆಳದಿಂಗಳು ಫೌಂಡೇಶನ್ 6 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಹಸ್ತಾಂತರಿಸಿದೆ.

2022ರ ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿ ಸಮೀಪದ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಕುಕ್ಕರ್​ ಬಾಂಬ್​ ಸ್ಫೋಟವಾಗಿತ್ತು. ಘಟನೆಯಲ್ಲಿ ಗಾಯಗೊಂಡು ಪುರುಷೋತ್ತಮ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಅವರ ಪುತ್ರಿಯ ಮದುವೆ ನಿಶ್ಚಯವಾಗಿದ್ದರಿಂದ, ಪುರುಷೋತ್ತಮ್ ಮನೆಯ ದುರಸ್ತಿ ಕಾರ್ಯವನ್ನ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ ಈ ದುರ್ಘಟನೆ ಬಳಿಕ ಮನೆ ದುರಸ್ತಿಯಾಗದೆ ಕಂಗೆಟ್ಟಿದ್ದರು. ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದಾಗ ಪುರುಷೋತ್ತಮ್ ತಮ್ಮ ನೋವನ್ನು ತೋಡಿಕೊಂಡಿದ್ದರು. ಈ ವೇಳೆ ಗುರು ಬೆಳದಿಂಗಲು ಫೌಂಡೇಶನ್ ಅವರು ಮನೆ ನವೀಕರಿಸುವ ಭರವಸೆ ನೀಡಿದ್ದರು.

ಉಡುಪಿ: ಬಿಜೆಪಿ ಸದಸ್ಯೆ ಶೋಭಾ ಬೇಕಲ್ ಕಾಂಗ್ರೆಸ್ ಸೇರ್ಪಡೆ – Vishwanews24

ಅದರಂತೆ ಇಂದು ಗುರು ಬೆಳದಿಂಗಲು ಫೌಂಡೇಶನ್ ಕೊಟ್ಟ ಮಾತಿನಂತೆ ಮನೆ ನವೀಕರಣಗೊಳಿಸಿ ಯುಗಾದಿ ಹಬ್ಬದ ಗಿಪ್ಟ್​ ನೀಡಿದ್ದಾರೆ.

Leave a Reply