ಮಂಗಳೂರು : ಕುಕ್ಕರ್ ಬ್ಲಾಸ್ ಪ್ರಕರಣ: ಇಂಜಿನಿಯರಿಂಗ್ ಕಾಲೇಜಿಗೆ NIA ದಾಳಿ – Vishwanews24
ಮಂಗಳೂರು : ಕುಕ್ಕರ್ ಬ್ಲಾಸ್ ಪ್ರಕರಣ: ಇಂಜಿನಿಯರಿಂಗ್ ಕಾಲೇಜಿನ ಮೇಲೆ ಎನ್ಐಎ ದಾಳಿ
ಉಡುಪಿ ಮೂಲದ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎನ್ಐಎ ವಶಕ್ಕೆ
ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದಂತ ಆಟೋದಲ್ಲಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಇಂದು ಈ ಸಂಬಂಧ ನಗರದಲ್ಲಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.
ಅಲ್ಲದೇ ಪ್ರಕರಣ ಸಂಬಂಧ ಪಿ.ಎ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧ ಉಗ್ರ ಶಾರಿಕ್ ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆತ ನೀಡಿದಂತ ಮಾಹಿತಿಯ ಆಧಾರ ಮೇಲೆ ಇಂದು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ 7 ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದ್ದಾರೆ.
ಇದೀಗ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹಲವು ಮಹತ್ವದ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ಎನ್ಐಎ ಅಧಿಕಾರಿಗಳು ನಿರತರಾಗಿರೋದಾಗಿ ತಿಳಿದು ಬಂದಿದೆ.
ಮಂಗಳೂರು: ಭಾರತೀಯ ಜನತಾ ಪಾರ್ಟಿಯಲ್ಲಿ ನಳಿನ್ ವಿದೂಷಕ ಇದ್ದ ಹಾಗೆ : ಸಿದ್ಧರಾಮಯ್ಯ – Vishwanews24
ಶಾರಿಕ್ ನೀಡಿದಂತ ಮಾಹಿತಿಯ ಆಧಾರದ ಮೇಲೆ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಂತ ಉಡುಪಿ ಮೂಲದ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ಎನ್ಐಎ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಈತ ಶಿವಮೊಗ್ಗದಲ್ಲಿ ನಡೆದಿದ್ದಂತ ಟ್ರಯಲ್ ಬ್ಲಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಅಂದಹಾಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ತುಂಗಾದಡದಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ಮಾಜ್ ಮುನೀರ್ ಬಂಧಿಸಿದ್ದರು. ಈ ಪ್ರಕರಣವನ್ನು ಸರ್ಕಾರ ಎನ್ಐಎಗೆ ವಹಿಸಿತ್ತು. ಈ ಸಂಬಂಧ ತನಿಖೆ ನಡೆಸಿದ್ದಂತ ಎನ್ಐಎ ಅಧಿಕಾರಿಗಳು, ಮಾಜ್ ಜೊತೆಗೆ ಉಗ್ರರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಂತ ಮಂಗಳೂರಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದಂತ ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿದೆ. ಈ ಸಂಬಂಧ ತನಿಖೆ ಮುಂದುವರೆಸಿದೆ.
ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕ : ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು – Vishwanews24
