ಮಂಗಳೂರು : ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ…? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ? : ಅಶ್ರಫ್ – Vishwanews24
ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ…? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ?
ಮಂಗಳೂರು: ಇಲ್ಲಿ ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ…? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್ ಪ್ರಶ್ನಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಸಂಘಟನೆಯನ್ನು ದೇಶದಾದ್ಯಂತ ಐದು ವರ್ಷಗಳ ಕಾಲ ನಿಷೇಧ ಮಾಡಿರುವ ಕ್ರಮವನ್ನು ವಿರೋಧಿಸಿ ಕಿಡಿಕಾರಿದ ಅವರು ‘ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು ಈ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಾರೆ, ಗಲಭೆಗೆ ಕಾರಣವಾಗುತ್ತಾರೆ ಎಂದು ಬ್ಯಾನ್ ಮಾಡಿದ್ದಾರೆ.
ರಾಜ್ಯ, ದೇಶದಲ್ಲಿ ವಿವಿಧ ಸಂಘಟನೆಗಳು ಕೂಡಾ ತುಂಬಾ ಇದ್ದು, ಅವುಗಳನ್ನು ಕೂಡಾ ಬ್ಯಾನ್ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ ಎಂದರು.
ಮುಸಲ್ಮಾನರನ್ನು ಕೊಲ್ಲಿ ಎಂದು ಕೆಲವು ಹಿಂದು ಸಂಘಟನೆಗಳು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿವೆ. ಇದು ಸರಿಯೇ..? ಇಂತಹ ಸಂಘಟನೆಗಳನ್ನು ಕೂಡಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
PFI ನಿಷೇಧ : ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ – Vishwanews24
