ಮಂಗಳೂರು: ಚಿಕಿತ್ಸೆಗೆಂದು ಕರೆದುಕೊಂಡು ಬಂದು ಆಸ್ಪತ್ರೆಯಲ್ಲೇ ಯುವತಿ ಮೇಲೆ ನಿರಂತರ ಅತ್ಯಾಚಾರ – vishwanews24
ಮಂಗಳೂರು: ಚಿಕಿತ್ಸೆಗೆಂದು ಕರೆದುಕೊಂಡು ಬಂದು ಆಸ್ಪತ್ರೆಯಲ್ಲೇ ಯುವತಿ ಮೇಲೆ ನಿರಂತರ ಅತ್ಯಾಚಾರ ..
ನಗ್ನ ಫೋಟೋ ಇಟ್ಕೊಂಡು ಬ್ಲಾಕ್ಮೇಲ್ ..
ಕೇರಳ ಮೂಲದ ಆರೋಪಿ ಪೊಲೀಸ್ ವಶಕ್ಕೆ ..
ಮಂಗಳೂರು: ಚಿಕಿತ್ಸೆಗೆಂದು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪರಿಚಯಸ್ಥನೇ ಆಸ್ಪತ್ರೆಯಲ್ಲಿ ನಿರಂತರ ಅತ್ಯಾಚಾರ ಎಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆರೋಪಿ ಕೇರಳ ಮೂಲದ ಸಜಿತ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೈಲ್ಸ್ ಗೆ ಚಿಕಿತ್ಸೆಗೆ ಯುವತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಜಿತ್, ಚಿಕಿತ್ಸೆಯ ಬಳಿಕ ಆಸ್ಪತ್ರೆಯ ಕೊಠಡಿಯಲ್ಲಿದ್ದ ವೇಳೆ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ನಗ್ನ ಫೋಟೋಗಳನ್ನ ತೆಗೆದಿದ್ದು, ಬೆದರಿಕೆ ಹಾಕುತ್ತಿದ್ದ.
ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಪ್ರಕರಣ : ತನಿಖೆ ಸಿಸಿಬಿಗೆ ವರ್ಗಾವಣೆ – vishwanews24
ಆ ಬಳಿಕ ನಗ್ನ ಫೋಟೋ ಇದೆ ಎಂದು ಬೆದರಿಸಿ, ಆಕೆಯನ್ನು ಮಂಗಳೂರಿನ ಖಾಸಗಿ ಹೋಟೇಲ್ ಗೆ ಕರೆಸಿಕೊಂಡು ಅಲ್ಲಿನ ಕೊಠಡಿಯಲ್ಲಿ ಅತ್ಯಾಚಾರ ನಡೆಸಿದ್ದಾನೆ. ಅದಾದ ಬಳಿಕ ಯುವತಿ ಫುಡ್ ಫಾಯಿಸನ್ ಆಗಿ ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾದಾಗ ಅಲ್ಲೂ ಕೊಠಡಿಯಲ್ಲಿ ಅತ್ಯಾಚಾರ ಮಾಡಿದ್ದಾನೆಂದು ಯುವತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ, ಇದರಿಂದ ನೊಂದ ಸಂತ್ರಸ್ತೆ ಪೊಲೀಸ್ ರಾಣೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣದ ಆರೋಪಿಯನ್ನು ನ್ಯಾಯಾಲಕ್ಕೆ ಹಾಜಪಡಿಸಲಾಗಿದೆ.
