ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಕದಡಿರುವುದೇ ಐವನ್ ಡಿಸೋಜಾ, ಅವರನ್ನು ಇಲ್ಲಿಂದ ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ : ನಳಿನ್ ಕುಮಾರ್ ಕಟೀಲ್ -Vishwanews24
ಮಂಗಳೂರು: ಮಂಗಳೂರಿಗೆ ಅಮಿತ್ ಶಾ ಆಗಮಿಸಿದರೆಶಾಂತಿ ಕದಡೋದಾಗಿ ಹೇಳಿರುವ ಐವನ್ ಡಿಸೋಜಾ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಶಾಂತಿ ಕದಡಿರುವುದೇ ಐವನ್ ಡಿಸೋಜಾ. ಹಾಗಾಗಿ ಅವರನ್ನು ಇಲ್ಲಿಂದ ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಮಂಗಳೂರು ಭೇಟಿ ಕಾರ್ಯಕ್ರಮ ಇನ್ನೂ ನಿಗದಿಯಾಗಿಲ್ಲ. ಮಂಗಳೂರು, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಇರಲಿದೆ. ಸಿಂಧನೂರು ಭಾಗದಲ್ಲಿ ಬಾಂಗ್ಲಾ ಮತ್ತು ಪಾಕ್ ನಿರಾಶ್ರಿತರು ಇರೋ ಕಾರಣ ಅಲ್ಲೊಂದು ಕಾರ್ಯಕ್ರಮವಿದೆ. ಆದರೆ ಯಾರ್ಯಾರು ಎಲ್ಲಿಗೆ ಬರಬೇಕು ಅನ್ನೋದು ಇನ್ನೂ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು
