ಮಂಗಳೂರು: ಟಿಪ್ಪುಸುಲ್ತಾನ್ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ – DYFI ಮುಖಂಡರ ಆಕ್ರೋಶ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಟಿಪ್ಪುಸುಲ್ತಾನ್ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ – DYFI ಮುಖಂಡರ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ  ತಾಲೂಕಿನ ಹರೇಕಳದಲ್ಲಿ ಡಿವೈಎಫ್‍ಐ ಸಂಘಟನೆ ತನ್ನ ರಾಜ್ಯ ಸಮ್ಮೇಳನ ಪ್ರಚಾರಕ್ಕಾಗಿ ಹಾಕಿರುವ ಟಿಪ್ಪುಸುಲ್ತಾನ್ನ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.

ಫೆ.25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟುನಲ್ಲಿ ಡಿವೈಎಫ್‍ಐ ನ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಹರೇಕಳ ಡಿವೈಎಫ್‍ಐ ಸಮಿತಿ ಬ್ಯಾನರ್ ಬಂಟಿಗ್ಸ್ ಹಾಕಿ 6 ಅಡಿ ಎತ್ತರದ ಟಿಪ್ಪುಸುಲ್ತಾನ್ ನ ಕಟೌಟ್ ಹಾಕಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪರವಾನಗಿ ಪಡೆಯದೆ ಹಾಕಿರುವ ಕಟೌಟ್ ಆಗಿರೋದ್ರಿಂದ ತಕ್ಷಣ ತೆರವು ಮಾಡಬೇಕೆಂದು ಕೊಣಾಜೆ ಪೊಲೀಸರು ನೋಟೀಸ್ ನೀಡಿದ್ದಾರೆ.

ಕರ್ನಾಟಕದಲ್ಲಿ ಗೆಲುವಿಗಾಗಿ ರಣತಂತ್ರವನ್ನೇ ಬದಲಾಯಿಸಿದ ಬಿಜೆಪಿ – ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನೆ- Vishwanews24

ಹರೇಕಳ ಡಿವೈಎಫ್‍ಐ ಸಮಿತಿ ಅಧ್ಯಕ್ಷರಿಗೆ ಈ ನೋಟಿಸ್ ನೀಡಲಾಗಿದೆ. ನಾವು ಎಲ್ಲಾ ಧರ್ಮದ ದಾರ್ಶನಿಕರ ಫೋಟೋ, ಕಟೌಟ್ ಗಳನ್ನು ಹಾಕಿದ್ದು ಯಾವುದಕ್ಕೂ ಪ್ರತ್ಯೇಕ ಪರವಾಗಿ ಪಡೆದಿಲ್ಲ. ಹೀಗಾಗಿ ಟಿಪ್ಪು ಕಟೌಟನ್ನು ತೆರವುಗೊಳಿಸುವುದಿಲ್ಲ ಎಂದು ಡಿವೈಎಫ್‍ಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply