ಮಂಗಳೂರು: ತಂದೆಯಿಂದ ಅಪ್ರಾಪ್ತ ಪುತ್ರಿ ಮೇಲೆ ಅತ್ಯಾಚಾರ – ಆರೋಪಿಯ ಬಂಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ತಂದೆಯಿಂದ ಅಪ್ರಾಪ್ತ ಪುತ್ರಿ ಮೇಲೆ ಅತ್ಯಾಚಾರ – ಆರೋಪಿಯ ಬಂಧನ -Vishwanews24

ಮಂಗಳೂರು, (Vshwanews24): ಅಪ್ರಾಪ್ತ ಬಾಲಕಿ ಮೇಲೆ ತಂದೆಯೇ ಹಲವು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ 5ನೇ ತರಗತಿ ಕಲಿಯುತ್ತಿದ್ದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ತಂದೆಯೇ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕವೂ ರೀತಿ ಹಲವಾರು ಬಾರಿ ಅತ್ಯಾಚಾರವೆಸಗಿರುವುದರಿಂದ ಅಪ್ರಾಪ್ತ ನೊಂದ ಬಾಲಕಿಯು ದೈಹಿಕ ಹಾಗೂ ಮಾನಸಿಕ ತೊಂದರೆಗೆ ಒಳಗಾಗಿದ್ದಳು.

ಇದೀಗ ಬಾಲಕಿ ೧೦ ನೇ ತರಗತಿ ಓದುತ್ತಿದ್ದು , ತಂದೆಯ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅತ್ಯಾಚಾರ ಆರೋಪಿಯಾದ ಬಾಲಕಿ ತಂದೆಯನ್ನು ಬಂಧಿಸಿದ್ದಾರೆ.

ಕಾಪು : ಬೈಕ್ ಗೆ ಟೆಂಪೋ ಡಿಕ್ಕಿ , ಬೈಕ್ ಸವಾರ ಸಾವು -Vishwanews24