ಮಂಗಳೂರು : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ; ಆರೋಪಿಯ ಬಂಧನ -Vishwanews24
ಮಂಗಳೂರು : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ; ಆರೋಪಿಯ ಬಂಧನ -Vishwanews24
ಮಂಗಳೂರು, : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಸೂರ್ಯ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಸೂರ್ಯ ಪಾದರಕ್ಷೆಯಲ್ಲಿ ತುಳುನಾಡಿನ ಧ್ವಜದ ಚಿತ್ರ ಬಿಡಿಸಿ ತುಳುಭಾಷೆಗೆ ತುಳುನಾಡಿಗೆ ಅವಮಾನ ಎಸಗಿದ್ದ. ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಎಡಿಟ್ ಮಾಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದ. ಆ ಮೂಲಕ ತುಳು ಭಾಷೆಗೆ ಅವಮಾನ ಮಾಡಿದ್ದ. ಇದರ ವಿರುದ್ಧ ತುಳುನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆರೋಪಿಯನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಜರಗಿಸುವಂತೆ ಒತ್ತಾಯಿಸಲಾಗಿತ್ತು. ಇದೀಗ ಆರೋಪಿಯನ್ನು ಬೆಂಗಳೂರಿನಿಂದ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
