ಮಂಗಳೂರು : ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿ ಶಾಸಕ ಡಾ.ಭರತ್ ಶೆಟ್ಟಿ ಭಾವುಕ – Vishwanews24

Featured, ದಕ್ಷಿಣ ಕನ್ನಡ

ತನ್ನ ಕ್ಷೇತ್ರದ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಉಚಿತವಾಗಿ ಅವಕಾಶ ಕಲ್ಪಿಸಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ

ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ತನ್ನ ಕ್ಷೇತ್ರದ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಉಚಿತವಾಗಿ ಅವಕಾಶ ಕಲ್ಪಿಸಿದ್ದರು. ಈ ವೇಳೆ ಅವರೇ ಸಿನಿಮಾ ನೋಡಿ ಭಾವುಕರಾಗಿ ಹೊರಬಂದಿದ್ದಾರೆ.

ಮಂಗಳೂರಿನ ಭಾರತಗ ಸಿನಿಮಾ ಮಲ್ಟಿಫ್ಲೆಕ್ಸ್‍ನಲ್ಲಿ ಭರತ್ ಶೆಟ್ಟಿ ಅವರೇ ವೈಯಕ್ತಿಕವಾಗಿ ಎಲ್ಲರ ಟಿಕೆಟ್‍ಗಳನ್ನು ಖರೀದಿಸಿ ವೀಕ್ಷಣೆಗೆ ಪ್ರೋತ್ಸಾಹಿಸಿದರು. ಮೂರು ಗಂಟೆಗಳ ಕಾಲ ಸಿನಿಮಾವನ್ನ ಕಾರ್ಯಕರ್ತರೊಂದಿಗೆ ಅವರೂ ವೀಕ್ಷಿಸಿ ಹೊರಬಂದ ಭರತ್ ಶೆಟ್ಟಿ ಭಾವುಕರಾಗಿದ್ದರು.

ಈ ಹಿಂದೆ ನಿಜವಾಗಿ ನಡೆದ ಅತ್ಯಾಚಾರ, ನರಮೇಧ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಿನಿಮಾ ನೋಡಿದ ಮೇಲೆ ಕಣ್ಣಾರೆ ಕಂಡ ರೀತಿ ಇದೆ. ಈ ದೃಶ್ಯಗಳನ್ನು ನೋಡಿ ಮನಸ್ಸು ಭಾರವಾಗಿ ವಿಚಲಿತಗೊಂಡಿದೆ. ಮಾತಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ಸರ್ಕಾರ ಪೊಲೀಸ್ ಕಾನೂನು ಇದ್ದರೂ ಏನು ಮಾಡಲು ಸಾಧ್ಯವಾಗದೆ ಇಂತಹ ನರಮೇಧವನ್ನು ಮೌನವಾಗಿ ಸಹಿಸಿಕೊಂಡು ಇದ್ದದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿದೆ. ಇಂತಹ ಘಟನೆ ಮುಂದೆ ಮರುಕಳಿಸಬಾರದು ಎಂದರು.

ವಿದೇಶಿ ಶಕ್ತಿಗಳ ಉಗ್ರಗಾಮಿಗಳ ಕೈವಾಡ ಹಾಗೂ ಜನಾಂಗೀಯತೆಯನ್ನು ಬೆಳೆಯಲು ಬಿಡದೆ ದೇಶವನ್ನು ಸದೃಢವಾಗಿ ಬೆಳೆಸುವ ಹಾಗೂ ಕಾಶ್ಮೀರಿ ಪಂಡಿತರಿಗೆ ಅವರ ನ್ಯಾಯಯುತ ಹಕ್ಕನ್ನು ಒದಗಿಸಿಕೊಡುವ ಕೆಲಸವಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.

ಹೈಕೋರ್ಟ್ ತೀರ್ಪಿಗೆ ಅಸಮಾಧಾನ : ಕಾಪು ತಾಲೂಕಿನ ಹಲವೆಡೆ  ಮುಸ್ಲಿಮರಿಂದ ಬೆಂಬಲ; ವ್ಯಾಪಾರ ಸ್ಥಗಿತ – Vishwanews24

Leave a Reply