ಮಂಗಳೂರು: ದೈವ ನರ್ತನ ವೇಳೆ ಮೃತಪಟ್ಟ ದೈವ ನರ್ತಕ ಕುಟುಂಬಕ್ಕೆ ಪಟ್ಲ ಟ್ರಸ್ಟ್ ನೆರವು – Vishwanews24
ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ 1ಲಕ್ಷ ರೂ. ನೆರವು ಘೋಷಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್
ಮಂಗಳೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾಚ್೯ 30 ರಂದು ದೈವಾರಾಧನೆ ನಡೆಯುತ್ತಿದ್ದ ಸ್ಥಳದಲ್ಲಿ ದೈವ ನರ್ತನ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಒಂದು ಲಕ್ಷ ರೂ. ಆರ್ಥಿಕ ನೆರವು ಘೋಷಣೆ ಮಾಡಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ದೈವಾರಾಧನೆ ಕುರಿತು ಅಪಾರ ಜ್ಞಾನ ಹೊಂದಿದ್ದ ಕಾಂತು ಅಜಿಲರು ಹಲವರಿಗೆ ಸಂಶೋಧನೆ ಕುರಿತು ಮಾಹಿತಿ ನೀಡುತ್ತಿದ್ದರು. ಎಡಮಂಗಲದ ಪ್ರಮುಖ ದೈವಸ್ಥಾನದಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿದ್ದರು. ಅವರು 45 ವರ್ಷಗಳಿಂದ ದೈವ ನರ್ತಕರಾಗಿ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮದೈವಗಳ ಪರಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದರು.
