ಮಂಗಳೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್‌ : ಇಬ್ಬರಿಗೆ ಗಂಭೀರ ಗಾಯ – ಎಬಿವಿಪಿ ವಿದ್ಯಾರ್ಥಿಗಳ ಆಕ್ರೋಶ – vishwanews24

Featured, ದಕ್ಷಿಣ ಕನ್ನಡ

ವೇಗದ ಚಾಲನೆಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್‌ : ಇಬ್ಬರಿಗೆ ಗಂಭೀರ ಗಾಯ – ಎಬಿವಿಪಿ ವಿದ್ಯಾರ್ಥಿಗಳ ಆಕ್ರೋಶ

ಮಂಗಳೂರು:  ಖಾಸಗಿ ಬಸ್‌ ಒಂದು ಅತಿ ವೇಗದ ಚಾಲನೆಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ತಾಯಿ ಮಗಳು ಗಾಯಗೊಂಡ ಘಟನೆ ಮೂಡುಬಿದಿರೆ ಬಳಿ ತೋಡಾರಿನಲ್ಲಿ ನಡೆದಿದೆ.

ಈ ಅಪಘಾತ ತೋಡಾರ್‌ ನ ಮೈಟ್ ಕಾಲೇಜು ಮುಂಬಾಗದಲ್ಲೇ ನಡೆದಿದ್ದು, ವಿದ್ಯಾರ್ಥಿಗಳು ತೀವ್ರ ಆಕ್ರೋಶ ಗೊಂಡಿದ್ದಾರೆ. ಮಾಸ್ಟರ್‌ ಎಂಬ ಖಾಸಗಿ ಬಸ್‌ ಓವರ್‌ ಟೇಕ್ ಮಾಡುವ ಭರದಲ್ಲಿ ಕಾಲೇಜು ಬಸ್‌ಗೆ ಡಿಕ್ಕಿ ಹೊಡೆದು ಬಳಿಕ ತಾಯಿ ಮಗಳು ಇದ್ದ ದ್ವಿಚಕ್ರ ವಾಹನಕ್ಕೆ ಡಿ*ಕ್ಕಿ ಹೊಡೆದಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ : ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ‌ ಕೋರ್ಟ್ – vishwanews24

ಮಾಸ್ಟರ್‌ ಬಸ್‌ನ ಅವಾಂತರಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್‌ ಗೆ ಹಾನಿ ಮಾಡಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳಲ್ಲಿ ಖಾಸಗಿ ಬಸ್‌ಗಳ ಅತಿವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಸೂಕ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಒಂದು ಕಡೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅ*ಪಘಾತಗಳಿಗೆ ಅಹ್ವಾನ ನೀಡುತ್ತಿದೆ. ಅದರ ನಡುವೆ ಬಸ್‌ಗಳ ಅತಿ ವೇಗದಿಂದ ದ್ವಿಚಕ್ರ ವಾಹನ ಸವಾರರು ಜೀವ ಕೈಲಿ ಹಿಡಿದು ಓಡಾಡುವ ಪರಿಸ್ತಿತಿ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಉಪಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ : ದೇವೇಗೌಡರ ಹೇಳಿಕೆಗೆ ಡಿಸಿಎಂ ಸ್ಪಷ್ಟನೆ – vishwanews24

Leave a Reply