ಮಂಗಳೂರು : ನಮ್ಮಲ್ಲಿ ಗೋ ಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ : ರಘುಪತಿ ಭಟ್ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ನಮ್ಮಲ್ಲಿ ಗೋ ಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ : ರಘುಪತಿ ಭಟ್

ಮಂಗಳೂರು : ನಮ್ಮಲ್ಲಿ ಗೋಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ಕಿಡಿಕಾರಿದರು. ನಮ್ಮಲ್ಲಿ ಗೋ ಬ್ಯಾಕ್ ಎಂದು ಹೇಳಿದವರಿಗೆ ಇನ್ನೊಂದು ಕ್ಷೇತ್ರದಲ್ಲಿ ಸೀಟು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ವ್ಯಂಗ್ಯವಾಡಿದ ರಘುಪತಿ ಭಟ್, ಸೋತವರನ್ನು ಲೋಕಸಭೆಗೆ ನಿಲ್ಲಿಸಿದ್ದಾರೆ. ಜನಪ್ರತಿನಿಧಿಯಾಗಿ ನಾನು ಸಕ್ರಿಯವಾಗಿ ಕೆಲಸ ಮಾಡಿದವನು, ಚುನಾವಣಾ ರಾಜಕೀಯದಿಂದ ಹೊರಬರುವಷ್ಟು ವಯಸ್ಸು ನನ್ನದಲ್ಲ ಎಂದರು.

ಸೀಟು ತಪ್ಪಿಸುವಾಗ ಟಿವಿ ಯಲ್ಲಿ ನೋಡಿ ಗೊತ್ತಾಗೋದಲ್ಲ, ನಾಯಕರು ಕರೆದು ಈ ಕಾರಣಕ್ಕಾಗಿ ಕೊಡೊದಕ್ಕೆ ಆಗಲ್ಲ ಎಂದು ಹೇಳಬೇಕು. ಕೊಡ್ತೇನೆ ಕೊಡ್ತೇನೆ ಎಂದು ಹೇಳಿ ತಪ್ಪಿಸೋದು ಒಳ್ಳೆಯ ಲಕ್ಷಣವಲ್ಲ, ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಏನು ಎಂಬುದರ ಬಗ್ಗೆ ಪಕ್ಷ ಆತ್ಮವಿಮರ್ಶೆ ಮಾಡಬೇಕು ಎಂದು ಹೇಳಿದರು.

Leave a Reply