ಮಂಗಳೂರು : ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ; ಪರಿಹಾರದ ನೆಪದಲ್ಲಿ ಸಂಘ, ಸಂಸ್ಥೆಗಳು ಹಣ ಸಂಗ್ರಹಿಸುವಂತಿಲ್ಲ : ಡಿಸಿ ಎಚ್ಚರಿಕೆ
ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಕಲಿ ಅಕೌಂಟ್‌ಗಳ ಬಗ್ಗೆ ದೂರು ದಾಖಲಾಗಿದೆ.
ಸಾರ್ವಜನಿಕರು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಹಣ ನೀಡಬೇಡಿ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹಣ ನೀಡುವುದಿದ್ರೆ ಸಿಎಂ ಪರಿಹಾರ ನಿಧಿಗೆ ಮಾತ್ರ ಹಣ ನೀಡಿ. ಸಿಎಂ ಪರಿಹಾರ ನಿಧಿ ಖಾತೆಗೆ ಹಣ ವರ್ಗಾಯಿಸಿ ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
