ಮಂಗಳೂರು : ಪಕ್ಷಾಂತರ ಮಾಡುವುದು ದೇಶದ್ರೋಹದ ಕೆಲಸ :ಶೆಟ್ಟರ್ ವಿರುದ್ದ ಜನಾರ್ಧನ ಪೂಜಾರಿ ಆಕ್ರೋಶ – vishwanews24
ಮಂಗಳೂರು : ಪಕ್ಷಾಂತರ ಮಾಡುವುದು ದೇಶದ್ರೋಹದ ಕೆಲಸ : ಶೆಟ್ಟರ್ ವಿರುದ್ದ ಜನಾರ್ಧನ ಪೂಜಾರಿ ಆಕ್ರೋಶ
ಮಂಗಳೂರು : ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರ್ಪಡೆಯಾಗಿ ಇದೀಗ ಮತ್ತೆ ಬಿಜೆಪಿ ಗೆ ಬಂದ ಜಗದೀಶ್ ಶೆಟ್ಟರ್ ವಿರುದ್ದ ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಜಗದೀಶ ಶೆಟ್ಟರ್, ಈಗ ಲೋಕಸಭಾ ಚುನಾವಣೆ ಎದುರಿನಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ರೀತಿ ಪಕ್ಷಾಂತರ ಮಾಡುವುದು ದೇಶದ್ರೋಹದ ಕೆಲಸ’ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
‘ಬಿಜೆಪಿಯಲ್ಲಿ ಅವರಿಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಕಾಂಗ್ರೆಸ್‌ಗೆ ಬಂದ್ದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಅವರು ಪರಾಭವಗೊಂಡರೂ, ಅನೇಕ ಕಾಂಗ್ರೆಸ್ ಹಿರಿಯ ಕಾರ್ಯಕರ್ತರನ್ನು ಬದಿಗಿಟ್ಟು, ಶೆಟ್ಟರ್ ಅವರಿಗೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ, ಈಗ ಈ ರೀತಿ ಬೆಳವಣಿಗೆ ಆಗಿದ್ದು ಸರಿಯಲ್ಲ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.
