ಮಂಗಳೂರು : ಪಟಾಕಿ ಮಾರಲು ಹೊಸ ನಿಯಮ ಜಾರಿ; ವಿಶ್ವ ಹಿಂದೂ ಪರಿಷತ್ ವಿರೋಧ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಪಟಾಕಿ ಮಾರಲು ಹೊಸ ನಿಯಮ ಜಾರಿ; ವಿಶ್ವ ಹಿಂದೂ ಪರಿಷತ್ ವಿರೋಧ

ಮಂಗಳೂರು: ಪಟಾಕಿ ಮಳಿಗೆ ಹಾಕಲು ಸರ್ಕಾರ ಹೊಸ ನಿಯಮಾವಳಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ.

ಸಿದ್ದರಾಮಯ್ಯ ಸರ್ಕಾರವೇ ಹಿಂದೂ ವಿರೋಧಿಯಾಗಿದೆ. ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಬೇಡದ ನಿಯಮ ಜಾರಿ ತರಲಾಗುತ್ತಿದೆ. ಹಬ್ಬದ ಆಚರಣೆಗಳಿಗೆ ಅಡ್ಡಿ ಪಡಿಸಲಾಗುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿಯೂ ಬಾಂಡ್ ಸೇರಿದಂತೆ ಹಲವು ನಿಯಮ ತರಲಾಯಿತು. ಅಲ್ಲೂ ಸಹ ಅಡ್ಡಿಪಡಿಸುವ ಕೆಲಸವಾಗಿದೆ. ಈಗ ವಿಶ್ವಾದ್ಯಂತ ಹಿಂದೂಗಳು ಆಚರಿಸುವ ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕೃಷಿಭಾಗ್ಯ ಯೋಜನೆ ಮರುಚಾಲನೆಗೆ ನಿರ್ಧಾರ : ಸಿಎಂ ಸಿದ್ದರಾಮ್ಮಯ್ಯ – vishwanews24

ಮಂಗಳೂರಿನ ಮೂರು ಮೈದಾನದಲ್ಲಿ ಮಾತ್ರ ಪಟಾಕಿ ಮಾರಬೇಕೆಂದು ಹೇಳಲಾಗಿದೆ. ಹಿಂದೂಗಳನ್ನು ಧಮನ ಮಾಡಬೇಕೆಂದು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಷ್ಟು ಬಲವಾಗಿ ನಿಯಮ ಜಾರಿ ಮಾಡುವುದಾದರೆ ಮೈಕ್ ನಿಯಮ ಜಾರಿಯಾಗಲಿ. ಮಸೀದಿಗಳಲ್ಲಿ ಮೈಕ್ ಗಳನ್ನು ಜೋರಾಗಿ ಕೂಗಲಾಗುತ್ತಿದೆ. ಅದನ್ನು ನಿಲ್ಲಿಸುವ ಕೆಲಸ ಆಗಿದೆಯಾ..? ಸುಪ್ರೀಂ ಕೋರ್ಟ್ ನಿಯಮ ಪಾಲನೆ ಆಗಿದೆಯಾ‌‌.. ಹಿಂದೂಗಳ ಹಬ್ಬ ಆಚರಣೆ ಅಡ್ಡಿ ಮಾಡಬೇಕೆಂಬ ಧೋರಣೆ ಸರ್ಕಾರದ್ದಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಳ್ಳ ಆಗ್ರಹಿಸಿದರು.

Leave a Reply