ಮಂಗಳೂರು : ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ – vishwanews24
ಮಂಗಳೂರು : ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ
ಮಂಗಳೂರು : ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸರ ವಶದಿಂದ ತಪ್ಪಿಸಿಕೊಂಡರೂ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ಕರ್ನಾಟಕಸರ್ಕಾರ ಯೋಜನೆಗಳು
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರ ಆಗಸ್ಟ್ 11ರಂದು ನಡೆದ ಹೊಸಬೆಟ್ಟು ನಿವಾಸಿ ಸುದರ್ಶನ್ ಜೈನ್ ಕೊಲೆ ಪ್ರಕರಣದ ಆರೋಪಿಯಾಗಿರುವ ಸಿದ್ಧಕಟ್ಟೆ ನಿವಾಸಿ ಪ್ರಸಾದ್ ನ್ಯಾಯಾಲಯದ ಆವರಣದಿಂದ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಬಳಿಕ ಸಿಕ್ಕಿ ಬಿದ್ದಿರುವ ಆರೋಪಿ.
ಸುದರ್ಶನ್ ಜೈನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಸಾದ್ ಸೇರಿದಂತೆ ನಾಲ್ಕು ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು. ಸಂದೀಪ್ ಶೆಟ್ಟಿ, ಬಾಲರಾಜ್, ಪ್ರಭಾಕರ್ ಪರವಾಗಿ ವಕೀಲರು ಹಾಜರಾಗಿ ಜಾಮೀನಿಗೆ ವ್ಯವಸ್ಥೆ ಮಾಡಿದ್ದರು. ಆದರೆ ಪ್ರಸಾದ್ ಪರವಾಗಿ ವಕೀಲ ಇರಲಿಲ್ಲ ಹೀಗಾಗಿ ಈತನನ್ನು ಪೊಲೀಸ್ ವಶಕ್ಕೆ ನೀಡಲಾಗಿತ್ತು. ಈ ಹಿಂದೆ ವಿಚಾರಣಾ ದಿನಕ್ಕೆ ಹಾಜರಾಗಿರದ ಹಿನ್ನೆಲೆಯಲ್ಲಿ ಆರೋಪಿ ಪ್ರಸಾದ್ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು.
ಆರೋಪಿಯನ್ನು ರಿಮಾಂಡ್ ವಾರೆಂಟ್ ನೊಂದಿಗೆ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಕೋರ್ಟ್ ಸಂಕೀರ್ಣದ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿ, ಮನೆ ಸೇರಿದ್ದನು ಎನ್ನಲಾಗಿದೆ. ಈ ಸಂಬಂಧ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪುತ್ತೂರು: ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ ; ಆರ್ಯಾಪು ಗ್ರಾ.ಪಂ. ಪಿಡಿಒ ಅಮಾನತು – vishwanews24
2018ರ ಆಗಸ್ಟ್ 11ರಂದು ಬಟ್ಟೆ ವ್ಯಾಪಾರಿ ಸುದರ್ಶನ್ ಜೈನ್ ನಾಪತ್ತೆಯಾಗಿದ್ದು ವಾರದ ಬಳಿಕ ಫಲ್ಗುಣಿ ನದಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ ಪೊಲೀಸರು ತನಿಖೆ ನಡೆಸಿ ದಾಗ ಹಣದ ವಿಚಾರದಲ್ಲಿ ಸುದರ್ಶನ್ ಜೈನ್ ಅವರನ್ನು ಹತ್ಯೆಗೈದು ನದಿಗೆ ಹಾಕಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಸುದರ್ಶನ್ ಜೈನ್ ಸೋದರ ಸುಧೀರ್ ಜೈನ್, ಸಿದ್ದಕಟ್ಟೆಯ ಸಂದೀಪ್ ಶೆಟ್ಟಿ ಅರಂಬೋಡಿ ನಿವಾಸಿ ಬಾಲರಾಜ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಕಾರು ಚಾಲಕ ಪ್ರಸಾದ್ನನ್ನೂ ಪೊಲೀಸರು ಬಂಧಿಸಿದ್ದರು.
