ಮಂಗಳೂರು :  ಬಸ್ ಗೆ ಬೈಕ್  ಡಿಕ್ಕಿ ; ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಸ್ ಹಾಗೂ ಬೈಕ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ಬಸ್ ಗೆ ಬೈಕ್  ಡಿಕ್ಕಿ ;  ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಸ್ ಹಾಗೂ ಬೈಕ್

ಮಂಗಳೂರು : ಬೈಕ್ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಹಾಗೂ ಬಸ್ ಎರಡೂ ಸುಟ್ಟು ಬಸ್ಮವಾದ ಘಟನೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದಿದೆ.

ಬೈಕ್ ಒಂದು ಬಸ್ ಗೆ ಡಿಕ್ಕಿ ಹೊಡೆದ ಕಾರಣ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕೂಡಲೇ ಜನರು ಬಸ್ ನಿಂದ ಇಳಿದಿದ್ದಾರೆ.

ಆದರೆ ಬೆಂಕಿಯ ಕೆನ್ನಾಲೆ ಹೆಚ್ಚಾಗಿ ಬಸ್ ಗೂ ಹಬ್ಬಿದ ಹಿನ್ನಲೆ ಬಸ್ ಭಾಗಶಃ ಸುಟ್ಟು ಹೋಗಿದೆ. ಬಿಸಿಲಿನ ತಾಪಕ್ಕೆ ಹೆಚ್ಚಾಗಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು. ಬೆಂಕಿ ಆರಿಸಲು ಸಾರ್ವಜನಿಕರು ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಬಸ್ ಹೊತ್ತಿ ಉರಿದ ಕಾರಣ ರಸ್ತೆಯಲ್ಲಿ ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡಿದ್ದು, ದುರ್ಘಟನೆಯಲ್ಲಿ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ : ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ : ವೈಭವದ ಹೊರೆಕಾಣಿಕೆ ಸಮರ್ಪಣೆ – Vishwanews24

Leave a Reply