ಮಂಗಳೂರು ಬಾಂಬ್ ಪ್ರಕರಣ : ಆತ ಆದಿತ್ಯ ಆಗದೆ ಅಬ್ದುಲ್ ಆಗಿದ್ದರೆ ಬಿಜೆಪಿ ಇಷ್ಟೋತ್ತಿಗೆ ಗಲಭೆ ಎಬ್ಬಿಸಿ ಭಾರತ್ ಬಂದ್ ಗೆ ಕರೆ ಕೊಟ್ಟಾಗಿರುತ್ತಿತ್ತು : ಕಿಮ್ಮನೆ ರತ್ನಾಕರ್ -Vishwanews24
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಇಟ್ಟು ಸಿಕ್ಕಿ ಬಿದ್ದಿರುವ ವ್ಯಕ್ತಿಯ ಹೆಸರು ಆದಿತ್ಯ ಆಗಿದ್ದಕ್ಕೆ ಬಚಾವ್, ಒಂದು ವೇಳೆ ಆತ ಆದಿತ್ಯ ಆಗದೆ ಅಬ್ದುಲ್ ಆಗಿದ್ದರೆ ಬಿಜೆಪಿ ಸಂಘ ಪರಿವಾರ ಹಾಗೂ ಕೋಮುವಾದಿ ಸಂಘಟನೆಗಳು ಇಷ್ಟೋತ್ತಿಗೆ ಗಲಭೆ ಎಬ್ಬಿಸಿ, ಒಂದಿಷ್ಟು ಹೆಣ ಬೀಳಿಸಿ ಭಾರತ್ ಬಂದ್ ಗೆ ಕರೆ ಕೊಟ್ಟಾಗಿರುತ್ತಿತ್ತು ಎಂದು ಕಿಡಿಕಾರಿದ್ದಾರೆ.
ಬಾಂಬ್ ಇಟ್ಟವ ಮುಸ್ಲಿಂ ಆಗಿದ್ದರೆ ಆ ಸಮುದಾಯವನ್ನೇ ಗುರಿಯಾಗಿಸಿಕೊಂಡು ಆರೋಪ ಮಾಡಲಾಗುತ್ತಿತ್ತು. ದಲಿತರೋ, ಹಿಂದುಳಿದ ವರ್ಗದವರೋ ಆಗಿದ್ದರೆ ನಕ್ಸಲ್ ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ. ಆರ್ ಎಸ್ಎಸ್ ಅಥವಾ ಬಿಜೆಪಿ ಜೊತೆ ಸಂಬಂಧ ಉಳ್ಳವನಾಗಿದ್ದರೆ ಗಿರೀಶ್ ಮಟ್ಟಣ್ಣನವರ್ ಮತ್ತು ಆದಿತ್ಯರಾವ್ ನಂತೆ ದೇಶ ಭಕ್ತರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
