ಮಂಗಳೂರು : ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್- ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳು ಆಕ್ರೋಶ – Vishwanews24
ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್- ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳು ಆಕ್ರೋಶ
ಮಂಗಳೂರು: ಇಲ್ಲಿನ ಮೂವರು ಭಜರಂಗದಳದ ಕಾರ್ಯಕರ್ತರ ಗಡಿಪಾರು ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಇದೊಂದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಡೆಗೆ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಮಂಗಳೂರಲ್ಲಿ ನೈತಿಕ ಪೊಲೀಸ್ಗಿರಿ ನಡೆಸಿದ್ದ ಭಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುಲ್ತಾನ್ ಜ್ಯುವೆಲ್ಲರಿಯ ಕಾರ್ಯಕ್ರಮ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ಭಜರಂಗದಳದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಕಾಶ್ ಶಕ್ತಿನಗರ ಎನ್ನುವವರು ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ್ರು. ಈ ಬೆನ್ನಲ್ಲೇ ಪದೇ ಪದೇ ಕಾನೂನುಭಂಗ ಮಾಡ್ತಿರೋ ನಿಮ್ಮನ್ನು ಏಕೆ ಗಡಿಪಾರು ಮಾಡಬಾರದು, ಉತ್ತರಿಸಿ ಎಂದು ನೊಟೀಸ್ ಜಾರಿ ಮಾಡಿದೆ.
ಮಂಗಳೂರು ಪೊಲೀಸ್ ಆಯುಕ್ತರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ. ಅವರು ನಮಗೆ ಆರೋಪಿಗಳಷ್ಟೇ ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ ಎಂದು ತಿಳಿಸಿದ್ದಾರೆ.
ಗಡಿಪಾರು ನೊಟೀಸ್ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೋಹತ್ಯೆ ವಿರುದ್ಧ ಕಾನೂನು ಇದೆ, ಅಕ್ರಮ ಗೋಹತ್ಯೆ ಮಾಡೋದನ್ನು ನೋಡಿ ಸುಮ್ಮನಿರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈವರೆಗೆ ಪೊಲೀಸರಿಗೆ ತಿಳಿಸಿಯೇ ದಾಳಿ ಮಾಡುತ್ತಿದ್ದೆವು. ಇನ್ನು ಪೊಲೀಸರಿಗೆ ತಿಳಿಸದೆ ದಾಳಿ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.
