ಮಂಗಳೂರು :ಮಗುಚಿ ಬಿದ್ದ ಲಾರಿ ; ಕ್ಲೀನರ್ ಸಾವು,.

Featured, ದಕ್ಷಿಣ ಕನ್ನಡ

ಮಂಗಳೂರು: ಪೊಲೀಸರು ನಿಲ್ಲಿಸಲು ಸೂಚಿಸಿದ್ದಕ್ಕೆ ಹೆದರಿ ರಸ್ತೆ ಬದಿಯಿಂದ ಚಲಿಸಲೆತ್ನಿಸಿದಾಗ ಲಾರಿ ಪಲ್ಟಿಯಾಗಿದ್ದು, ಪರಿಣಾಮ ಕ್ಲೀನರ್ ಮೃತಪಟ್ಟಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಮೂಲದ ನಿವಾಸಿ ವಸಂತ್ ಕುಮಾರ್ (25) ಮೃತ ವ್ಯಕ್ತಿ. ಟ್ರಾಫಿಕ್ ಪೊಲೀಸರು ಓವರ್ ಬ್ರಿಡ್ಜ್ ಕಾಮಗಾರಿ ನಡುವೆ ಲಾರಿಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಿ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ತೊಕ್ಕೊಟ್ಟು ಜಂಕ್ಷನ್ ಬಳಿ ಟ್ರಾಫಿಕ್ ಪೊಲೀಸರು ಲಾರಿ ನಿಲ್ಲಿಸಿ ಕೇಸ್ ಹಾಕಲು ಮುಂದಾದಾಗ ಚಾಲಕ ಲಾರಿ ನಿಲ್ಲಿಸದೆ ರಸ್ತೆ ಬದಿಗೆ ತೆರಳಿದ ಸಂದರ್ಭ ಲಾರಿ ಚಕ್ರ ಒಳಚಂರಡಿಗೆ ಸಿಕ್ಕಿ ಲಾರಿ ಮಗುಚಿ ಬಿದ್ದಿದೆ. ಈ ಸಂದರ್ಭ ಲಾರಿ ಕ್ಲೀನರ್ ಬಿದ್ದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವ ಟ್ರಾಪಿಕ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಮಾರು ಎರಡು ಗಂಟೆಗಳ ಕಾಲ ನೂರಾರು ನೂರಾರು ಮಂದಿ ಪ್ರತಿಭಟನೆ ನಡೆಸಿದರು.