ಮಂಗಳೂರು: ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಂದೆ ; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಎರಡು ಜೀವ – vishwanews24
ಮಂಗಳೂರು: ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಂದೆ ; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಎರಡು ಜೀವ
ಮಂಗಳೂರು: ಮಗುವಿನೊಂದಿಗೆ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಎರಡು ಜೀವಗಳನ್ನು ಉಳಿಸಿದ್ದಾರೆ.
ಕಾವೂರು ಠಾಣಾ ವ್ಯಾಪ್ತಿಯ ಅಂಬಿಕಾನಗರದ 35 ವರ್ಷದ ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಮಂಗಳವಾರ ಸಂಜೆ ಪಣಂಬೂರು ಸಮುದ್ರ ತೀರಕ್ಕೆ ಬಂದಿದ್ದರು. ಬಳಿಕ ಮಗುವಿನೊಂದಿಗೆ ‘ನಾವಿಬ್ಬರೂ ಸಾಯೋಣ’ ಎಂದು ಹೇಳುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ತನ್ನ ಅಕ್ಕನಿಗೆ ಕಳುಹಿಸಿದ್ದರು. ಬಳಿಕ ಅವರು ಅದನ್ನು ಪೊಲೀಸರಿಗೆ ಕಳುಹಿಸಿದ್ದರು. ಈ ವಿಡಿಯೋ ಗಮನಿಸಿದ ಬಳಿಕ ಪಣಂಬೂರು ಪೊಲೀಸರು ಬೀಚ್ನಲ್ಲಿ ಎಲ್ಲಾ ಕಡೆ ತಂದೆ, ಮಗುವನ್ನು ಹುಡುಕಾಡಿದ್ದಾರೆ. ಆದರೆ ಅಲ್ಲಿ ಅವರು ಸಿಗದಿದ್ದ ಕಾರಣ ಆತನ ಮನೆಯನ್ನು ಹುಡುಕಾಡಿ ಮನೆಯತ್ತ ಬಂದಿದ್ದಾರೆ.
ಬೆಳ್ತಂಗಡಿ : ಅಕ್ರಮ ಗೋಸಾಗಾಟದಲ್ಲಿ ಸಿಕ್ಕಿಬಿದ್ದ ಆರೋಪಿಯ ಮನೆ ಜಪ್ತಿ ಮಾಡಿದ ಪೊಲೀಸರು – vishwanews24
ಪಣಂಬೂರು ಪೊಲೀಸರು ಮನೆಗೆ ಬಂದಾಗ ವ್ಯಕ್ತಿಯು ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಗಿಲು ಮುರಿದು ಆತ ಹಾಗೂ ಪುತ್ರಿಯನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಕಾವೂರು ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆತನಿಗೆ ತಿಳಿಹೇಳಿ ಮನೆಗೆ ಕಳುಹಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಮಾಹಿತಿ: ಘಟನೆ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ”ವಿಡಿಯೋ ಸಿಕ್ಕಿದ್ದರಿಂದ ಪಣಂಬೂರು ಪೊಲೀಸರ ತಂಡವು ಎಲ್ಲಾ ಬೀಚ್ ಮತ್ತು ಎಲ್ಲಾ ಸ್ಥಳಗಳಲ್ಲಿ ಇವರನ್ನು ಹುಡುಕುವಲ್ಲಿ ನಿರತವಾಗಿತ್ತು. ಪೊಲೀಸರು ಅವರನ್ನು ರಕ್ಷಿಸಲು ಸಮಯಕ್ಕೆ ಸರಿಯಾಗಿ ಬೀಚ್ನತ್ತ ಬಂದಿದ್ದರಿಂದ ಅವನು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ತೋರುತ್ತದೆ. ಆ ಸ್ಥಳದಿಂದ ಆತ ಹೊರಟುಹೋಗಿದ್ದ. ನಂತರ ಪೊಲೀಸರು ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಆತ್ಮಹತ್ಯೆ ಮುಂದಾಗಿರುವ ಸಂದರ್ಭದಲ್ಲಿ ಪೊಲೀಸರು ತಡೆದರು” ಎಂದು ತಿಳಿಸಿದ್ದಾರೆ.
ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ ಆರೋಪ; 8 ಮಂದಿ ಬಂಧನ – vishwanews24
