ಮಂಗಳೂರು ಮತ್ತೆ ಹಿಜಬ್ ವಿವಾದ : ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ – Vishwanews24
ಮಂಗಳೂರು ಮತ್ತೆ ಹಿಜಬ್ ವಿವಾದ : ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ – Vishwanews24
ಮಂಗಳೂರು: ರಾಜ್ಯದಲ್ಲಿ ಸೈಲೆಂಟ್ ಆದ ಹಿಜಬ್ ವಿವಾದ ಮತ್ತೆ ಮಂಗಳೂರಿನಲ್ಲಿ ಭುಗಿಲೆದ್ದಿದೆ. ಮಂಗಳೂರಿನ ವಿವಿ ಕಾಲೇಜಿನ ಪದವಿ ವಿಧ್ಯಾರ್ಥಿನಿಯರು ತರಗತಿ ಹಿಜಬ್ ಧರಿಸಿಕೊಂಡು ಬರುತ್ತಿದ್ದು, ಇಂದು ಹೈಕೋರ್ಟ್ ಆದೇಶದ ಉಲ್ಲಂಘಟನೆಯಾಗಿದೆ ಎಂದು ಕೆಲವು ವಿಧ್ಯಾರ್ಥಿಗಳು ಇಂದು ಕಾಲೇಜು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹೈಕೋರ್ಟ್ ಆದೇಶದ ಬಳಿಕವೂ ತರಗತಿಗೆ 40ಕ್ಕೂ ಅಧಿಕ ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಬ್ ಧರಿಸಿ ಆಗಮಿಸುತ್ತಿದ್ದಾರೆ ಎಂದು ವಿಧ್ಯಾರ್ಥಿಗಳು ಆರೋಪಿಸಿದ್ದು, ಕಾಲೇಜು ಆಡಳಿತ ಮಂಡಳಿ ಮಾತ್ರ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಆರೋಪಿಸಿದ್ದಾರೆ. ಹಿಜಬ್ ನಿಯಮವನ್ನು ಕಾಲೇಜಿನಲ್ಲಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದ್ದಾರೆ.
