ಮಂಗಳೂರು: ಮದುವೆಯ ಮರುದಿನ ಹೃದಯಾಘಾತದಿಂದ ಮೃತಪಟ್ಟ ಮದುಮಗಳು -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮದುವೆಯ ಮರುದಿನ ಹೃದಯಾಘಾತದಿಂದ ಮೃತಪಟ್ಟ ಮದುಮಗಳು -Vishwanews24

ಮಂಗಳೂರು,: ದಾಂಪತ್ಯ ಜೀವನ ಪ್ರವೇಶಿಸಿ ಕೆಲ ಗಂಟೆಗಳೇ ಕಳೆಯುವ ಮುಂಚೆಯೇ ಮದುಮಗಳು ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಅಡ್ಯಾರ್ ನಲ್ಲಿ ಮಾ.1 ರ ಸೋಮವಾರ ಮುಂಜಾನೆ ನಡೆದಿದೆ.

ಮೃತ ನವವಿವಾಹಿತೆಯನ್ನು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂದು ಗುರುತಿಸಲಾಗಿದೆ.

ಆಫಿಯಾ ಅವರ ವಿವಾಹವೂ ಭಾನುವಾರ ಕಣ್ಣೂರಿನ ಯುವಕ ಮುಬಾರಕ್ ಎಂಬವರೊಂದಿಗೆ ಅಡ್ಯಾರ್ ಕಣ್ಣೂರು ಜುಮಾ ಮಸೀದಿಯಲ್ಲಿ ನೆರವೇರಿತ್ತು. ಆ ಬಳಿಕ ವಿವಾಹದ ಔತಣಕೂಟವೂ ಅಡ್ಯಾರ್ ಗಾರ್ಡನ್‌ನಲ್ಲಿ ಏರ್ಪಡಿಸಲಾಗಿತ್ತು.

ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ , ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಮನವಿ -Vishwanews24

ಇದಾದ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಬಂದಿದ್ದರು. ನವಜೋಡಿಯು ವಿವಾಹದ ಸಂಭ್ರಮದಲ್ಲಿದ್ದು, ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ವಿವಾಹದ ಸಂಭ್ರಮದಲ್ಲಿದ್ದ ಮನೆಯನ್ನು ನೋವು ಮಡುಗಟ್ಟಿದೆ.