ಮಂಗಳೂರು : ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು – Vishwanews24
ಮಂಗಳೂರು : ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು
ಮಂಗಳೂರು: ಮಂಗಳೂರಿನ ಕೊಟ್ಟಾರದಿಂದ ನಂತೂರಿನ ಕಡೆಗೆ ಬರುತ್ತಿದ್ದ ಮದುವೆ ದಿಬ್ಬಣದ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಂಗಳೂರಿನ ನಂತೂರಿನಲ್ಲಿ ನಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಕಾರು ಚಾಲಕ ಪಾರಾಗಿದ್ದಾರೆ. ಓವರ್ ಟೇಕ್ ಭರಾಟೆಯಲ್ಲಿ ಈ ದುರಂತ ನಡೆದಿದೆ ಎಂದು ಗೊತ್ತಾಗಿದೆ.
ಮಂಗಳೂರಿನ ನಂತೂರು ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಮದುವೆ ದಿಬ್ಬಣದ ಈ ಬಸ್ಸಿನಲ್ಲಿ ಬಹಳಷ್ಟು ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ.
ಕಾರು ಚಾಲಕ ಕೂಡಾ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದ್ದರಿಂದ ಹೆದ್ದಾರಿಯುದ್ದಕ್ಕೂ ಕೆಲ ಕಾಲ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು.
ಬಳಿಕ ಸಂಚಾರಿ ಪೊಲೀಸರು ಆಗಮಿಸಿ ವಾಹನವನ್ನು ತೆರವುಗೊಳಿಸಿದರು.
ಸುರತ್ಕಲ್: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ , ನಾಲ್ವರ ರಕ್ಷಣೆ – Vishwanews24
