ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್‌ ಆಗಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ – Vishwanews24

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್‌, ಉಪಮೇಯರ್‌ ಚುನಾವಣೆ ಇಂದು ನಡೆದಿದ್ದು ಮೇಯರ್‌ ಆಗಿ ಬಿಜೆಪಿಯ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

ಮೇಯರ್‌ ಸಾಮಾನ್ಯ ಹಾಗೂ ಉಪ ಮೇಯರ್‌ ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು ಮೇಯರ್‌ ಸ್ಥಾನಕ್ಕೆ ಪ್ರೇಮಾನಂದ ಅವರ ಹೆಸರು ಕೇಳಿಬಂದಿದ್ದರೂ ಕೂಡಾ ಉಪಮೇಯರ್‌ ಸ್ಥಾನಕ್ಕೆ ಸುಮಾರು 10 ಕ್ಕೂ ಅಧಿಕ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದರು.

ಇತರರಿಗೆ ಮಾದರಿಯಾಗುವ ಬದುಕು ನಮ್ಮದಾಗಬೇಕು : ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ -Vishwanews24

ಮಾರ್ಚ್ 2 ರ ಮಂಗಳವಾರ ಮಧ್ಯಾಹ್ನ ಮತದಾನ ನಡೆದಿದ್ದು ನಿರೀಕ್ಷೆಯಂತೆ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿಯವರು ಆಯ್ಕೆಯಾಗಿದ್ದು ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

ಒಟ್ಟು 64 ಮತಗಳು (60 ಕಾರ್ಪೊರೇಟರ್‌ಗಳು, 2 ಶಾಸಕರು) ಮತಗಳಿದ್ದು ಸಂಸದ ನಳಿನ್‌ ಕುಮಾರ್ ಕಟೀಲ್ ಮತ್ತು ಎಂಎಲ್‌ಸಿ ಬಿ ಎಂ ಫಾರೂಕ್ ಗೈರುಹಾಜರಾಗಿದ್ದರು. ಶಾಸಕ ವೇದವ್ಯಾಸ್ ಕಾಮತ್, ಶಾಸಕ ಭರತ್ ವೈ ಶೆಟ್ಟಿ ಉಪಸ್ಥಿತರಿದ್ದರು. ಎಸ್‌ಡಿಪಿಐನ ಇಬ್ಬರು ತಟಸ್ಥರಾಗಿ ನಿಂತರು. ಚುನಾವಣೆ ನಡೆಸಲು ಚುನಾವಣಾ ಅಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಮನಪಾ ಉಪ ಆಯುಕ್ತ ಸಂತೋಷ್ ಉಪಸ್ಥಿತರಿದ್ದರು.

ಮಂಗಳೂರು ವಿಮಾನ ನಿಲ್ದಾಣ : ಟ್ರಾಲಿ ಬ್ಯಾಗ್‌ನಲ್ಲಿ 16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ -Vishwanews24

ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಅವರು 46 ಮತಗಳನ್ನು ಗಳಿಸಿ ಜಯ ಗಳಿಸಿದ್ದು ಕಾಂಗ್ರೆಸ್‌ನ ಅನಿಲ್ ಕುಮಾರ್ 14 ಮತಗಳನ್ನು ಗಳಿಸಿದರು.

ಉಪಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಸುಮಂಗಲಾ ರಾವ್ 46 ಮತಗಳನ್ನು ಗಳಿಸಿದರೆ, ಕಾಂಗ್ರೆಸ್‌ನ ಜೆಸಿಂತಾ ಆಲ್ಫ್ರೆಡ್ 14 ಮತಗಳನ್ನು ಗಳಿಸಿದ್ದಾರೆ.

ಟೂಲ್‌ ಕಿಟ್‌ ಪ್ರಕರಣ : ನಿಖಿತಾ ಜಾಕೋಬ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್ -Vishwanews24