ಮಂಗಳೂರು: ರಸ್ತೆ ದಾಟುವಾಗ ಬಸ್ ಢಿಕ್ಕಿ ; ವಿದ್ಯಾರ್ಥಿನಿ ದಾರುಣ ಸಾವು -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ರಸ್ತೆ ದಾಟುವಾಗ ಬಸ್ ಢಿಕ್ಕಿ ; ವಿದ್ಯಾರ್ಥಿನಿ ದಾರುಣ ಸಾವು -Vishwanews24

ಮಂಗಳೂರು: ರಸ್ತೆ ದಾಟುವಾಗ ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮರಕಡ ಜಂಕ್ಷನ್ ನಲ್ಲಿ  ಮಾ.31 ರ ಬೆಳಗ್ಗೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಚೆಲ್ಲಯ್ಯ ಅವರ ಪುತ್ರಿ, ಕಾವುರು ಕುಂಜತ್ ಬೈಲ್ ಜ್ಯೋತಿನಗರ ನಿವಾಸಿ ಸಿ.ಪವಿತ್ರ (21) ಎಂದು ಗುರುತಿಸಲಾಗಿದೆ. ಪವಿತ್ರ ರಸ್ತೆ ದಾಟುತ್ತಿದ್ದಾಗ ಕಿನ್ನಿಗೋಳಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ನವದುರ್ಗಾ ಬಸ್ಸು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈಕೆ ಮಂಗಳೂರು ವಿ.ವಿಯ ಪ್ರಥಮ ಎಂ.ಕಾಂ ವಿದ್ಯಾರ್ಥಿನಿಯಾಗಿದ್ದಾಳೆ.

ಇದನ್ನೂ ಓದಿ : ಹವಾಮಾನ ಇಲಾಖೆ ಮುನ್ಸೂಚನೆ : ರಾಜ್ಯದ ಈ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಸಾಧ್ಯತೆ ! -Vishwanews24