ಮಂಗಳೂರು ವಿಮಾನ ನಿಲ್ದಾಣ : ಟ್ರಾಲಿ ಬ್ಯಾಗ್ನಲ್ಲಿ 16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ -Vishwanews24
ಮಂಗಳೂರು ವಿಮಾನ ನಿಲ್ದಾಣ : ಟ್ರಾಲಿ ಬ್ಯಾಗ್ನಲ್ಲಿ 16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ -Vishwanews24
ಮಂಗಳೂರು: ಮಾರ್ಚ್ 2 ರ ಮಂಗಳವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಟ್ರಾಲಿ ಬ್ಯಾಗ್ ಗಳಲ್ಲಿ ಮುಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇತರರಿಗೆ ಮಾದರಿಯಾಗುವ ಬದುಕು ನಮ್ಮದಾಗಬೇಕು : ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ -Vishwanews24
ಪ್ರಕರಣಕ್ಕೆ ಸಂಬಂಧ ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ.
ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ 16,52,000 ರೂ. ಎಂದು ಹೇಳಲಾಗಿದೆ. ಉಪ ಆಯುಕ್ತ ಡಾ.ಕಪಿಲ್ ಗಡೆ ಐಆರ್ಎಸ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಅಧಿಕಾರಿಗಳಾದ ನಾಗೇಶ್ ಕುಮಾರ್, ಅಧೀಕ್ಷಕರು, ಸುಬೇಂದು ಬೆಹ್ರಾ ಮತ್ತು ನವೀನ್ ತಂಡದಲ್ಲಿದ್ದರು.
