ಮಂಗಳೂರು: ವಿವಾಹಿತ ಮಹಿಳೆ ನಾಪತ್ತೆ – vishwanews24
ಮಂಗಳೂರು: ಹಾಸ್ಟೆಲ್‌ನಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದ ವಿವಾಹಿತ ಮಹಿಳೆ ನಾಪತ್ತೆ
ಮಂಗಳೂರು: ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಹಾಸ್ಟೆಲ್‌ನಲ್ಲಿದ್ದು, ಶಿಕ್ಷಣ ಪಡೆಯುತ್ತಿದ್ದ ಆಕರ್ಷಣಾ ಆರ್. ಗಿರಿ (24) ನಾಪತ್ತೆಯಾಗಿದ್ದಾರೆ.
ಶಿರ್ತಾಡಿಯ ಕಾರ್ತಿಕ್ ಎಸ್. ಮಯ್ಯ ಅವರ ಪತ್ನಿಯಾಗಿದ್ದು, 3 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆ ವೇಳೆ ಆಕೆ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿದ್ದು, ಆಕೆಯ ಇಚ್ಛೆಯಂತೆ ಶಿಕ್ಷಣ ಮುಂದುವರಿಸಲು ಮೂರು ತಿಂಗಳ ಹಿಂದೆ ನಗರದ ಶಿಕ್ಷಣ ಸಂಸ್ಥೆಯೊಂದಕ್ಕೆ ಪತ್ನಿಯನ್ನು ದಾಖಲಿಸಿದ್ದರು. ಡಿ. 1ರಂದು ಪತಿಯ ಮನೆ ಮೂಡುಬಿದಿರೆಗೆ ಹೋಗುವುದಾಗಿ ವಾರ್ಡನ್‌ಗೆ ತಿಳಿಸಿ ಸಂಜೆ 7.20ಕ್ಕೆ ಹಾಸ್ಟೆಲ್‌ನಿಂದ ತೆರಳಿದ್ದರು. ಅಲ್ಲಿಂದ ಮನೆಗೂ ಹೋಗದೆ, ಹಾಸ್ಟೆಲ್‌ಗೂ ವಾಪಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ; ಪ್ರಕರಣ ದಾಖಲು – vishwanews24
