ಮಂಗಳೂರು:  ಸ್ಪೋರ್ಟ್ಸ್ ಡೇ ಎಂದು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು:  ಸ್ಪೋರ್ಟ್ಸ್ ಡೇ ಎಂದು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದ ವರ್ಷಿತಾ ಫ್ಲೋರಾ (19) ನಾಪತ್ತೆಯಾಗಿದ್ದಾರೆ.

ಮೂಲತಃ ಮೈಸೂರಿನವರಾಗಿದ್ದು ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದ ಇವರು ಫೆ. 16ರಂದು ಬೆಳಗ್ಗೆ 7ಕ್ಕೆ ಕಾಲೇಜಿಗೆ ಸ್ಪೋರ್ಟ್ಸ್ ಡೇ ಎಂದು ಹೇಳಿ ಹೋಗಿದ್ದರು. ಅಪರಾಹ್ನ 3.30ಕ್ಕೆ ತಾಯಿಗೆ ಕರೆ ಮಾಡಿ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅನಂತರ ಅವರ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಬಿಳಿ ಮೈಬಣ್ಣ, 5.4 ಅಡಿ ಎತ್ತರ, ದುಂಡು ಮುಖ, ಸಾಧಾರಣ ಶರೀರ, ಉದ್ದ ಕಪ್ಪು ತಲೆಕೂದಲು ಹೊಂದಿದ್ದು ಕಪ್ಪು ಬಣ್ಣದ ಪ್ಯಾಂಟ್‌, ಬಳಿ ಮತ್ತು ಕಂದು ಬಣ್ಣದ ಗೆರೆಗಳಿರುವ ಟೀ ಶರ್ಟ್‌ ಧರಿಸಿದ್ದರು. ಕನ್ನಡ, ಇಂಗ್ಲಿಷ್‌, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಉಡುಪಿ: ಬಜೆಟ್ ನಲ್ಲಿ ಬಿಲ್ಲವ ಹಾಗೂ ಮೊಗವೀರ ಸಮುದಾಯ ಕಡೆಗಣನೆ : ರಮೇಶ್ ಕಾಂಚನ್ ಆಕ್ರೋಶ – Vishwanews24

Leave a Reply