ಮಂಗಳೂರು : ಹಿಂದೂ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ಹಿಂದೂ ಮಹಾಸಭಾದಿಂದ 224 ಕ್ಷೇತ್ರಗಳಲ್ಲೂ ಸ್ಪರ್ಧೆ : ರಾಜೇಶ್ ಪವಿತ್ರನ್ – Vishwanews24

Featured, ದಕ್ಷಿಣ ಕನ್ನಡ

BJP ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರು, ನಾಯಕರನ್ನು ಜೈಲಿಗೆ ಕಳಿಸುತ್ತಿದೆ..

ಹಿಂದೂ ನಾಯಕರು ಅಧಿಕಾರಕ್ಕೆ ಬರಲು ಮಾಡಿದ ವೇದಿಕೆ ಹಿಂದೂ ಮಹಾ ಸಭಾ..

ಚುನಾವಣೆಯಲ್ಲೇ ಉತ್ತರ ಕೊಡ್ತೇವೆ..

.ಹಿಂದೂಗಳಿಗೆ ರಕ್ಷಣೆ ಸಿಗಬೇಕಾದರೆ ನಾವು ಗೆಲ್ಲಬೇಕು..

ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್

ದಕ್ಷಿಣ ಕನ್ನಡ: ಈ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರು, ನಾಯಕರನ್ನು ಜೈಲಿಗೆ ಕಳಿಸುತ್ತಿದೆ. ಸಾಕ್ಷಿ ಇಲ್ಲದೇ ಇದ್ದಬದ್ದ ಸೆಕ್ಷನ್ ಹಾಕಿ ಜೈಲಿಗೆ ಹಾಕ್ತಿದ್ದಾರೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಕಿಡಿಕಾರಿದ್ದಾರೆ. ‘

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದೂ ಮಹಾಸಭಾ ನಾಯಕರ ಮೇಲೆ ದಬ್ಬಾಳಿಕೆ ಹೆಚ್ಚಿದೆ. ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ, ಬೆದರಿಕೆ ಕೇಸ್ ಹಾಕಿ ಜೈಲಿಗೆ ಹಾಕಲು ಯತ್ನಿಸಿದರು. ಕೋರ್ಟ್ ಅವರಿಗೆ ಛೀಮಾರಿ ಹಾಕಿ ಬೇಲ್ ನೀಡಿದೆ. ಪರ್ಯಾಯ ವ್ಯವಸ್ಥೆ ಬಗ್ಗೆ ಹಿಂದೂ ಮಹಾ ಸಭಾ ಮಾತಾಡ್ತಿದೆ. ಹಿಂದೂ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು 224 ಕ್ಷೇತ್ರಗಳಿಗೂ ಗಮನ ಹರಿಸಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ತಾಯಿ ಹೀರಾ ಬೆನ್‌ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು – Vishwanews24

ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲಿಸಿ. ಅದು ಬಿಟ್ಟು ಜೈಲಿಗೆ ಕಳಿಸುವ ಕೆಲಸ ಬೇಡ ಎಂದ ರಾಜೇಶ್ ಪವಿತ್ರನ್, ನಾವು ಚುನಾವಣೆಯಲ್ಲೇ ಉತ್ತರ ಕೊಡ್ತೇವೆ. ಹಿಂದೂ ನಾಯಕರು ಅಧಿಕಾರಕ್ಕೆ ಬರಲು ಮಾಡಿದ ವೇದಿಕೆ ಹಿಂದೂ ಮಹಾ ಸಭಾ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ, ಸಂಘದ ನಾಯಕರು ಹಿಂದೂ ಮಹಾ ಸಭಾಕ್ಕೆ ಸೇರ್ತಿದಾರೆ. ಹಿಂದೂಗಳಿಗೆ ರಕ್ಷಣೆ ಸಿಗಬೇಕಾದರೆ ನಾವು ಗೆಲ್ಲಬೇಕು. ಚುನಾವಣೆಯಲ್ಲಿ ನಮ್ಮನ್ನು ತಡೆಯಲು ಶಕ್ತಿ ಇದ್ದರೆ ಮಾಡಿ. ಅನೇಕರು ಅಪ್ಲಿಕೇಷನ್ ನೀಡಿದ್ದಾರೆ. 83 ಅಭ್ಯರ್ಥಿಗಳ ಪಟ್ಟಿ ಜನವರಿಯಲ್ಲಿ ಬಿಡುಗಡೆ ಮಾಡ್ತೇವೆ. ಕೆಲವು ರೈತ ಸಂಘಗಳು ನಮ್ಮೊಂದಿಗೆ ಸೇರ್ತಿದಾರೆ. ಕೇಸರಿ ಒಕ್ಕೂಟ – ಸಮಾನ ಮನಸ್ಕ ಸಂಘಟನೆಗಳು ಸೇರಿ ಆಗಿದೆ ಎಂದರು.

ಪ್ರಧಾನಿ ಮೋದಿ ತಾಯಿ ಹೀರಾ ಬೆನ್‌ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು – Vishwanews24

Leave a Reply