ಮಂಗಳೂರು : ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬೆಕ್ಕೊಂದನ್ನು ನುಂಗಲಾಗದೆ ಸಂಕಷ್ಟಪಡುತ್ತಿದ್ದ ಹೆಬ್ಬಾವಿನ ದೇಹದಲ್ಲಿ 11 ಏರ್ ಬುಲೆಟ್ ಪತ್ತೆ

ಮಂಗಳೂರು: ಬೆಕ್ಕೊಂದನ್ನು ನುಂಗಲಾಗದೆ ಸಂಕಷ್ಟಪಡುತ್ತಿದ್ದ ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಏರ್‌ ಬುಲೆಟ್‌ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಆನೆಗುಂಡಿ ಬಳಿ ಹೆಬ್ಬಾವಿವೊಂದು ಪರ್ಶಿಯನ್‌ ಬೆಕ್ಕನ್ನು ತಿಂದು ನುಂಗಲಾರದೆ ಸಂಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉರಗತಜ್ಞರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಉರಗ ತಜ್ಞರು ಹೆಬ್ಬಾವಿನ ದೇಹವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಹೆಬ್ಬಾವಿನ ದೇಹದಲ್ಲಿ 11 ಬುಲೆಟ್ ಪತ್ತೆಯಾಗಿದೆ.

ಭೀಕರ ಕಾರು ಅಪಘಾತ ;ಬೆಂಕಿ ಹೊತ್ತಿಕೊಂಡು ಹುಡುಗಿ ಸಜೀವ ದಹನ – Vishwanews24

ಹೆಬ್ಬಾವು ಪರ್ಶಿಯನ್‌ ಬೆಕ್ಕನ್ನು ತಿನ್ನುವಾಗ ಅದರ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿ ನುಂಗಲಾರದೆ ಕಷ್ಟಪಡುತ್ತಿತ್ತು. ಉರಗತಜ್ಞ ಭುವನ್‌ ದೇವಾಡಿಗ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆಬ್ಬಾವಿನಿಂದ ಬಲೆ ತೆರವುಗೊಳಿಸಿ ರಕ್ಷಿಸಲಾಯಿತು. ಪಶುವೈದ್ಯ ಡಾ| ಯಶಸ್ವಿ ಅವರು ಹೆಬ್ಬಾವಿಗೆ ಚಿಕಿತ್ಸೆ ನೀಡಿದ್ದಾರೆ.

ಆದರೆ ಹೆಚ್ಚಿನ ಚಿಕಿತ್ಸೆಗೆಂದು ಹೆಬ್ಬಾವನ್ನು ಎಕ್ಸ್‌ರೇ ಮಾಡಿಸಿದಾಗ ದೇಹದಲ್ಲಿ 11 ಏರ್‌ ಬುಲೆಟ್‌ ಪತ್ತೆಯಾಗಿದೆ. ಸುಮಾರು ವರ್ಷಗಳ ಹಿಂದೆಯೇ ಈ ಹೆಬ್ಟಾವಿಗೆ ಏರ್‌ಗನ್‌ನಿಂದ ಶೂಟ್‌ ಮಾಡಿರಬಹುದು. ಇದೇ ಕಾರಣಕ್ಕೆ ಕೆಲವೊಂದು ಬುಲೆಟ್‌ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲೆಟ್‌ಗಳನ್ನು ಸದ್ಯ ಹೊರತೆಗೆಯಲಾಗಿದ್ದು, ಸದ್ಯ ಹೆಬ್ಬಾವು ಚೇತರಿಸಿಕೊಳ್ಳುತ್ತಿದೆ ಎಂದು ಉರಗ ತಜ್ಞ ಭುವನ್‌ ದೇವಾಡಿಗ ತಿಳಿಸಿದ್ದಾರೆ.

ಭೀಕರ ಕಾರು ಅಪಘಾತ ;ಬೆಂಕಿ ಹೊತ್ತಿಕೊಂಡು ಹುಡುಗಿ ಸಜೀವ ದಹನ – Vishwanews24

Leave a Reply