ಮಂಗಳೂರು: ಹೊಸ ವರ್ಷಾಚರಣೆ – ಪಬ್ ಮತ್ತು ಹೊಟೇಲ್‌ಗಳಲ್ಲಿ ಮುಸ್ಲಿಂ ಯುವಕರಿಗೆ ಪ್ರವೇಶ ಕೊಡದಿರಿ : ಪುನೀತ್‌ ಅತ್ತಾವರ  – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಹೊಸ ವರ್ಷಾಚರಣೆ – ಡಿ. 31 ರಂದು ರಾತ್ರಿ ನಿಗದಿತ ವೇಳೆಗೆ ಪಾರ್ಟಿಗಳನ್ನು ಬಂದ್‌ ಮಾಡಬೇಕು.

ಪಬ್, ಪಾರ್ಟಿ ಮತ್ತು ಹೊಟೇಲ್‌ಗಳಲ್ಲಿ ಮುಸ್ಲಿಂ ಯುವಕರಿಗೆ ಪ್ರವೇಶ ಕೊಡದಿರಿ..

ಬಜರಂಗ ದಳ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ವಿನಂತಿ..

ಮಂಗಳೂರು: ಮುಸ್ಲಿಂರ ಇಸ್ಲಾಂ ದರ್ಮದ ಪ್ರಕಾರ ಅವರಿಗೆ ಪಾರ್ಟಿ ನಿಷಿದ್ಧ. ಆದರೂ ಕೂಡಾ ಪಬ್ ಮತ್ತು ಪಾರ್ಟಿಗಳಲ್ಲಿ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರೇ ಇರುತ್ತಾರೆ.

ಅಲ್ಲಿ ಲವ್ ಜಿಹಾದ್‌ಗೆ ಪ್ರೇರಣೆ ಸಿಗುತ್ತದೆ ಎಂದು ಆರೋಪಿಸಿ ಪಬ್ ಮತ್ತು ಹೊಟೇಲ್‌ಗಳಲ್ಲಿ ಮುಸ್ಲಿಂ ಯುವಕರಿಗೆ ಪ್ರವೇಶ ಕೊಡದಿರಿ ಎಂದು ಬಜರಂಗ ದಳ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಪಬ್ ಮತ್ತು ಹೊಟೇಲ್‌ ಮಾಲಕರನ್ನು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಹೊಸ ವರ್ಷಾಚರಣೆ ಸಂಬಂಧಿತ ಪಾರ್ಟಿಗಳ ಮೇಲೆ ಭಜರಂಗದಳ ಸಂಘಟನೆಯ ಕಣ್ಣು ನೆಟ್ಟಿದ್ದು, ಡಿಸೆಂಬರ್‌ 31 ರಂದು ರಾತ್ರಿ ನಿಗದಿತ ವೇಳೆಗೆ ಪಾರ್ಟಿಗಳನ್ನು ಬಂದ್‌ ಮಾಡಬೇಕು.

ಬೆಳ್ತಂಗಡಿ:ಗೂಡ್ಸ್ ರಿಕ್ಷಾಗೆ ಶಾಲಾ ಬಸ್ ಡಿಕ್ಕಿ :  ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ – Vishwanews24

ಈ ಕುರಿತಂತೆ ಅವರು ಮಾಹಿತಿ ನೀಡಿ ಹೊಸ ವರ್ಷಾಚರಣೆಯ ಮುಂಚಿನ ದಿನವಾದ ಡಿಸೆಂಬರ್‌31 ರಂದು ರಾತ್ರಿ ನಿಗದಿತ ವೇಳೆಗೆ ಪಾರ್ಟಿಗಳನ್ನು ಬಂದ್‌ ಮಾಡುವ ಅದೇಶ ಹೊರಡಿಸುವಂತೆ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

Leave a Reply