ಮಂಗಳೂರು Airport : ಗುದನಾಳದಲ್ಲಿ ಚಿನ್ನ ಸಾಗಾಟ; ಓರ್ವ ಅರೆಸ್ಟ್ -Vishwanews24
ಮಂಗಳೂರು Airport : ಗುದನಾಳದಲ್ಲಿ ಚಿನ್ನ ಸಾಗಾಟ; ಓರ್ವ ಅರೆಸ್ಟ್ -Vishwanews24
ಮಂಗಳೂರು: ಗುದನಾಳದಲ್ಲಿ ಅಡಗಿಸಿಟ್ಟು ದುಬೈನಿಂದ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊಹಿದಿನ್ ಮುನಾಸಿರ್ ಪದಿನಾರ್ ಮೊಹಮದ್ ಬಂಧಿತ ಆರೋಪಿ.
ಆರೋಪಿ ಮೊಹಿದಿನ್ ಮುನಾಸಿರ್ ದುಬೈನಿಂದ ವಿಮಾನದ ಮೂಲಕ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಈ ಸಂದರ್ಭ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಆರೋಪಿಯನ್ನು ಬಂಧಿಸಿ, 20.89 ಲಕ್ಷ ರೂ. ಮೌಲ್ಯದ 430 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
