ಮಂಡ್ಯ : ಗದ್ದೆಗಿಳಿದು ಭತ್ತ ನಾಟಿ ಮಾಡಿದ `ನಿಖಿಲ್ ಕುಮಾರಸ್ವಾಮಿ’ – Vishwanews24

Featured, ರಾಜ್ಯ ನ್ಯೂಸ್
ಮಂಡ್ಯಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯ ಬಳಿಕ ಇದೀಗ ಅವರ ಪುತ್ರ, ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮದ್ದೂರು ತಾಲೂಕಿನ ಅತಗೂರು ಗ್ರಾಮದಲ್ಲಿ ಇಂದು ಗದ್ದೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಆತಗೂರಿನ ಗ್ರಾಮಸ್ಥರೊಬ್ಬರ ಗದ್ದೆಯಲ್ಲಿ ನಿಖಿಲ್ ಇಂದು ನಾಟಿ ಮಾಡಿದ್ದಾರೆ. ಈ ಹಿಂದೆ ಸಿಎಂ ಕುಮಾರಸ್ವಾಮಿ ಕೂಡಾ ಮಂಡ್ಯ ಗದ್ದೆಯಲ್ಲಿ ನಾಟಿ ಮಾಡಿದ್ದರು. ಈ ಮೂಲಕ ನಾವು ಕೂಡ ರೈತರ ಮಕ್ಕಳೆಂದು ರೈತರನ್ನು ಮತ್ತಷ್ಟು ಸೆಳೆಯುವ ಈ ಮೂಲಕ ಮತದಾರರ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಇಂದು ಮದ್ದೂರು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಈ ವೇಳೆ ಪ್ರಚಾರ ಮಾಡುತ್ತಿದ್ದ ವೇಳೆ ಪಕ್ಕದ ಗದ್ದೆಯಲ್ಲಿ ರೈತರು ಗದ್ದೆ ನಾಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ನಿಖಿಲ್ ತಾವೂ ಅವರೊಂದಿಗೆ ಸೇರಿ ನಾಟಿ ಮಾಡಿದ್ದಾರೆ.